ಹಿಜಾಬ್ ಪ್ರಕರಣ: ವಿದ್ಯಾಸಾಗರ್ ಶಿಕ್ಷಕಿ ಶಶಿಕಲಾ ರಾಜೀನಾಮೆ

Prasthutha|

ಬೆಂಗಳೂರು: ನಗರದ ವಿದ್ಯಾ ಸಾಗರ್ ಶಾಲೆಯಲ್ಲಿ ನಡೆದ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಕಿ ಶಶಿಕಲಾ ರಾಜೀನಾಮೆ ನೀಡಿದ್ದಾರೆ.

- Advertisement -

ಬೆಂಗಳೂರಿನ ಚಂದ್ರಾಲೇಔಟ್ ವಿದ್ಯಾಸಾಗರ್ ಶಾಲೆಯಲ್ಲಿ ಹಿಜಾಬ್ ತೆಗೆಯುವಂತೆ ಹಾಗೂ ಅವಹೇಳನಕಾರಿ ಬರೆದಿದ್ದ ಎನ್ನಲಾಗಿತ್ತು. ಶಿಕ್ಷಕಿಯ ನಡೆಯ ವಿರುದ್ಧ ಪೋಷಕರು ಸಿಡಿದೆದ್ದಿದ್ದರು. ಈ ವಿವಾದ ಹೇಗೆ ಬಂತು ಎಂದು ನನಗೆ ಶಾಕ್ ಆಗಿದೆ. ತರಗತಿಯಲ್ಲಿ ಯಾವುದೇ ಕೆಟ್ಟಮಾತು ಹೇಳಿಲ್ಲ. ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಗಲಾಟೆ ಮಾಡಬೇಡಿ ಎಂದು ಹೇಳಿದ್ದೆ ಎಂಬುದಾಗಿ  ಶಿಕ್ಷಕಿ ಶಶಿಕಲಾ ತಿಳಿಸಿದ್ದರು.

ಈ ಬೆಳವಣಿಗೆ ನಂತರ ಶಾಲಾ ಶಿಕ್ಷಕಿ ಶಶಿಕಲಾ ಅವರನ್ನು ಅಮಾನತುಗೊಳಿಸಲಾಗಿದೆ ಎನ್ನಲಾಗಿತ್ತು . ಆದರೆ ಅಮಾನತುಗೊಳಿಸಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿತ್ತು. ಕೆಲ ದಿನಗಳ ಕಾಲ ರಜೆಯ ಮೇಲೆ ಕಳುಹಿಸಿರುವುದಾಗಿ ತಿಳಿಸಿತ್ತು. ಈ ಎಲ್ಲಾ ಘಟನೆಯ ನಂತರ ಈಗ ಶಿಕ್ಷಕಿ ಶಶಿಕಲಾ ಅನಾರೋಗ್ಯದ ಕಾರಣ ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.  



Join Whatsapp