ಕೇರಳದ ಖಾಸಗಿ ಶಾಲೆಯಲ್ಲಿ ಹಿಜಾಬ್ ನಿರ್ಬಂಧ: ವರ್ಗಾವಣೆ ಪತ್ರ ಪಡೆದ ಮುಸ್ಲಿಮ್ ವಿದ್ಯಾರ್ಥಿನಿ

Prasthutha|

ಕ್ಯಾಲಿಕಟ್: ಕೇರಳದ ಕ್ಯಾಲಿಕಟ್ ಜಿಲ್ಲೆಯ ಪ್ರಾವಿಡೆನ್ಸ್ ಗರ್ಲ್ಸ್ ಹೈಯರ್ ಸೆಕೆಂಡರ್ ಶಾಲೆಯಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯೊಬ್ಬಳಿಗೆ ಹಿಜಾಬ್ ಧರಿಸಲು ನಿಷೇಧ ಹೇರಿದ ಹಿನ್ನೆಲೆಯಲ್ಲಿ ವರ್ಗಾವಣೆ ಪತ್ರ ಪಡೆದು ಶಾಲೆಯನ್ನು ತೊರೆದಿದ್ದಾರೆ. ಸದ್ಯ ಆಕೆ ಕ್ಯಾಲಿಕಟ್’ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಸೇರಿದ್ದಾರೆ.

- Advertisement -

ಪ್ರಥಮ ಪಿಯುಸಿ ತರಗತಿಗೆ ಸೇರ್ಪಡೆಯ ವೇಳೆ ಸಂತ್ರಸ್ತ ವಿದ್ಯಾರ್ಥಿನಿ, ಶಾಲಾ ಸಮವಸ್ತ್ರದ ಶಾಲನ್ನು ಸ್ಕಾರ್ಫ್ ಆಗಿ ಧರಿಸಲು ಅನುಮತಿ ಕೋರಿದ್ದು, ಇದಕ್ಕೆ ಶಾಲಾ ಆಡಳಿತ ಮಂಡಳಿ ಅನುಮತಿ ನಿರಾಕರಿಸಿದೆ ಎಂದು ಹೇಳಲಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ತಂದೆ ಮುಸ್ತಫಾ, ವಿದ್ಯಾರ್ಥಿನಿಯು ತನ್ನ ಧಾರ್ಮಿಕ ನಂಬಿಕೆಗಳನ್ನು ಅನುಷ್ಠಾನಕ್ಕೆ ತರಲು ತನ್ನ ತಲೆಯನ್ನು ಮುಚ್ಚಲು ಅನುಮತಿ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದು, ಅವಳಿಗಾಗಿ ಶಾಲಾ ನಿಯಮಗಳನ್ನು ಬದಲಿಸಲು ಸಾಧ್ಯವಿಲ್ಲ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಜರುಗಿಸುವಂತೆ SIO, ಮುಸ್ಲಿಮ್ ಯೂತ್ ಲೀಗ್, ಕ್ಯಾಂಪಸ್ ಫ್ರಂಟ್ ಸೇರಿದಂತೆ ಹಲವು ಸಂಘಟನೆಗಳು ಒತ್ತಾಯಿಸಿವೆ.

Join Whatsapp