ಮೂರನೇ ದಿನವೂ ಹಿಜಾಬ್‌ ಕುರಿತ ಅರ್ಜಿ ವಿಚಾರಣೆ: ಕಾಲೇಜು ಅಭಿವೃದ್ಧಿ ಸಮಿತಿಗೆ ಹಿಜಾಬ್ ನಿಷೇಧ ಅಧಿಕಾರ ಕೊಟ್ಟದ್ದಕ್ಕೆ ವಕೀಲರ ಆಕ್ಷೇಪ

Prasthutha|

ನವದೆಹಲಿ: ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸುವ ರಾಜ್ಯ ಸರ್ಕಾರದ ಆದೇಶ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಮೂರನೇ ದಿನವಾದ ಗುರುವಾರ ಕೂಡ ಮುಂದುವರಿಯಿತು.

- Advertisement -

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಾಮತ್, ಹಿಜಾಬ್ ನಿಷೇಧ ಅಧಿಕಾರವನ್ನು ಕಾಲೇಜು ಅಭಿವೃದ್ಧಿ ಮಂಡಳಿಗೆ ಕೊಟ್ಟಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್ ನಲ್ಲಿ ವಾದ ವಿವಾದ ಈ ರೀತಿ ನಡೆಯಿತು

- Advertisement -

ಕಾಮತ್: (ಕರ್ನಾಟಕ) ಹೈಕೋರ್ಟ್ ಅಪಾಯಕಾರಿ ವಲಯ ಪ್ರವೇಶಿಸಿದ್ದು ಈ ಎಲ್ಲಾ ಹಕ್ಕುಗಳು ಪರಸ್ಪರ ಅವಲಂಬಿತವಾಗಿವೆ. ಅದಕ್ಕಾಗಿಯೇ ನಮ್ಮ ಸಂವಿಧಾನ ರಚನಾಕಾರರು ಈ ವಲಯಕ್ಕೆ ಕೈ ಹಾಕಲಿಲ್ಲ.

ಕಾಮತ್: ಹಿಂದೂ ಧರ್ಮದಲ್ಲಿ ದೇವತೆಗಳನ್ನು ಪೂಜಿಸುತ್ತೇವೆ. ಯಾರಾದಾದರೂ ಜೇಬಿನಲ್ಲಿ ಕೃಷ್ಣ ಅಥವಾ ರಾಮನ ಫೋಟೋ ಇರುತ್ತದೆ, ನಾನೊಂದು ಫೋಟೋ ಒಯ್ಯುತ್ತಿದ್ದೆ. ಅದು ನನಗೆ ರಕ್ಷಣೆ ನೀಡುತ್ತಿತ್ತು. ಇದು ಧಾರ್ಮಿಕ ಸ್ವಾತಂತ್ರ್ಯವೋ ಅಥವಾ ಆತ್ಮಸಾಕ್ಷಿಯದ್ದೋ. ಒಂದರ ಗಡಿ ಮುಗಿದರೆ ಮತ್ತೊಂದರದ್ದು ಶುರು. ಅಂತಹ ಗಡಿಗಳು ಅನಂತ.

ಕಾಮತ್: ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯ ಪರಸ್ಪರ ಬಹಿಷ್ಕೃತ ಎಂದು ಹೈಕೋರ್ಟ್ ಹೇಳಿದೆ. ಅದು ಇರಬಹುದು ಅಥವಾ ಇಲ್ಲದಿರಬಹುದು. ನನ್ನ ಪ್ರಕಾರ ಅದು ಹಾಗಲ್ಲ.

ಕಾಮತ್: ಕೇಸರಿ ಶಾಲು ಧರಿಸುವುದು ನಂಬಿಕೆಯ ಮುಗ್ಧ ಅಭಿವ್ಯಕ್ತಿಯಲ್ಲ. ಕೇಸರಿ ಶಾಲು ಧರಿಸುವುದು ನಂಬಿಕೆಯ ಆಕ್ರಮಣಕಾರಿ ಪ್ರದರ್ಶನವಾಗಿದ್ದು ಸಂವಿಧಾನದ 25ನೇ ವಿಧಿ ಅದಕ್ಕೆ ರಕ್ಷಣೆ ನೀಡುವುದಿಲ್ಲ. ರುದ್ರಾಕ್ಷಿ, ನಾಮ, ಇತ್ಯಾದಿಗಳು ನಂಬಿಕೆಯ ಮುಗ್ಧ ಅಭಿವ್ಯಕ್ತಿಗಳು.

ಕಾಮತ್: ಕಾನೂನಿನಡಿ ಸ್ಕಾರ್ಫ್ ಧರಿಸಲು ನಿರ್ಬಂಧವಿದೆಯೇ. ಯಾವುದೂ ಇಲ್ಲ.

ಕಾಮತ್: ಸರ್ಕಾರದ ಆದೇಶ ಗಂಗಾಜಲದಂತೆ ಪರಿಶುದ್ಧ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಆದರೆ ಅದು ಸಂಪೂರ್ಣ ಕೆಸರುಮಯ ಎನ್ನುತ್ತೇನೆ ನಾನು. ಈ ರೀತಿಯ ನಂಟು ನಿಖರ ಮತ್ತು ತರ್ಕಬದ್ಧ ಹಾಗೂ ನೇರವಾಗಿರಬೇಕು.

ಕಾಮತ್: ದಯವಿಟ್ಟು ಕರ್ನಾಟಕ ಶಿಕ್ಷಣ ಕಾಯಿದೆಯ ಪ್ರಸ್ತಾವನೆಯನ್ನು ಓದಿ… ಹಕ್ಕಿನ ಮೇಲಿನ ಯಾವುದೇ ನಿರ್ಬಂಧ ನೇರ ಮತ್ತು ನಿಖರವಾಗಿರಬೇಕು, ಪರೋಕ್ಷ ಅಥವಾ ಸಂದೇಹಾಸ್ಪದವಾಗಿಯಲ್ಲ. ಹೈಕೋರ್ಟ್ ಕೂಡ ಇದನ್ನು ಉಲ್ಲೇಖಿಸಿದೆ. ಸರ್ಕಾರದ ಪ್ರಕಾರ ಪ್ರಸ್ತಾವನೆಯೇ ನಿರ್ಬಂಧವಾಗಿದೆ.

(ಸಾರ್ವಜನಿಕ ಸುವ್ಯವಸ್ಥೆ ಮತ್ತು ಏಕತೆ ಕಾಪಾಡಲು ಸಮವಸ್ತ್ರ ಧರಿಸಿ ಎಂದು ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶ ಓದಿದ ಕಾಮತ್)

ನ್ಯಾ. ಧುಲಿಯಾ: ಸಮಸ್ಯೆ ಏನು?

ನ್ಯಾ. ಗುಪ್ತಾ: ಸ್ಕಾರ್ಫ್ ನಿಷೇಧ ಸಂವಿಧಾನದ 25ನೇ ವಿಧಿಯ ಉಲ್ಲಂಘನೆಯಲ್ಲ ಎಂದು ಅವರು ಹೇಳುತ್ತಾರೆ.
ಕಾಮತ್: ಅದನ್ನು ನಿಷೇಧಿಸಬಹುದು ಎಂದಿದೆ ಹೈಕೋರ್ಟ್.

ಹಿಜಾಬ್ ಧರಿಸುವುದರಿಂದ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬರುವುದಿಲ್ಲ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದ ವಕೀಲ ಕಾಮತ್.

ಸಂವಿಧಾನದ 25ನೇ ವಿಧಿ ಪ್ರಕಾರ ನಾನು ನನ್ನ ಹಕ್ಕನ್ನು ಚಲಾಯಿಸಲು ಅನುವಾಗುವಂತಹ ವಾತಾವರಣ ಸೃಷ್ಟಿಸುವುದು ಸರ್ಕಾರದ ಕರ್ತವ್ಯ ಎಂದು ವಾದ ಮಂಡನೆ.

ಕಾಮತ್: ವಕೀಲ ಪರಾಶರನ್ ಧಾರ್ಮಿಕ ಚಿಹ್ನೆ ಧರಿಸುತ್ತಾರೆ, ಅದು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದೆ?
ನ್ಯಾ. ಗುಪ್ತಾ: ಸಮವಸ್ತ್ರ ಇರುವುದರಿಂದ ನೀವು ವಕೀಲರಿಗೆ ಹೋಲಿಸಲು ಸಾಧ್ಯವಿಲ್ಲ. ಈ ಹಿಂದೆ ಡಾ. ಧವನ್ ಪೇಟದ ವಿಚಾರ ಪ್ರಸ್ತಾಪಿಸಿದ್ದರು. ಆದರೆ ರಾಜಸ್ಥಾನದಲ್ಲಿ ಜನರು ದೈನಂದಿನ ಭಾಗವಾಗಿ ಪೇಟ ತೊಡುತ್ತಾರೆ.

ಶಿರವಸ್ತ್ರ ಕುರಿತಂತೆ ದಕ್ಷಿಣ ಆಫ್ರಿಕಾದ ಸಂವಿಧಾನದ ವಿಧಿ, ಆಸ್ಟ್ರಿಯಾದ ನ್ಯಾಯಾಲಯಗಳು ನೀಡಿರುವ ತೀರ್ಪು ಪ್ರಸ್ತಾಪಿಸಿದ ಹಿರಿಯ ನ್ಯಾಯವಾದಿ ದೇವದತ್ ಕಾಮತ್. ಅರ್ಜಿದಾರೆ ಆಯೇಷತ್ ಶಿಫಾ ಪರವಾಗಿ ಅವರಿಂದ ವಾದ ಮಂಡನೆ.ಕಾಲೇಜು ಅಭಿವೃದ್ಧಿ ಸಮಿತಿಗೆ ಹಿಜಾಬ್ ನಿಷೇಧ ಅಧಿಕಾರ ಕೊಟ್ಟದ್ದಕ್ಕೆ ವಕೀಲ ಕಾಮತ್ ಅವರಿಂದ ಆಕ್ಷೇಪ. ಸಮಿತಿಯಲ್ಲಿ ಶಾಸಕರು ಪೋಷಕರು ಇದ್ದು ಅಂತಹ ಅಧಿಕಾರವನ್ನು ಸರ್ಕಾರೇತರ ವ್ಯಕ್ತಿಗಳಿಗೆ ವಹಿಸಬಾರದು. ಶಾಸಕರು ಸಮಿತಿಯ ಅಧ್ಯಕ್ಷರಾಗಿದ್ದಾರೆ ಎಂದು ವಾದ ಮಂಡನೆ.

ಕಾಮತ್: ಕರ್ನಾಟಕ ಹೈಕೋರ್ಟ್ ಕಾರಣಗಳು ಮುಖ್ಯವಲ್ಲ, ಅಧಿಕಾರ ಇದ್ದು ಅದಷ್ಟೇ ಸಾಕು ಎನ್ನುತ್ತದೆ. ನನ್ನ ಮನವಿ ಏನೆಂದರೆ ಸರ್ಕಾರದ ಆದೇಶ ಸ್ವತಃ ನಿಲ್ಲುತ್ತದೆಯೇ ಅಥವಾ ಬಿದ್ದು ಹೋಗುತ್ತದೆಯೇ ಎಂಬುದು. ಹೈಕೋರ್ಟ್ ಸರ್ಕಾರದ ಆದೇಶಕ್ಕಾಗಿ ಕಾರಣಗಳನ್ನು ಬದಲಿಸಿದ್ದು ಇದಕ್ಕೆ ಅನುಮತಿಸಬಾರದು.

ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆ ಎಂಬ ಕುರಿತಂತೆ ವಿವಿಧ ಹೈಕೋರ್ಟ್‌ಗಳು ಬೇರೆ ಬೇರೆ ತೀರ್ಪು ನೀಡಿವೆ ಎಂದು ವಕೀಲ ಕಾಮತ್ ವಾದ ಮಂಡಿಸಿದರು.

ಮದ್ರಾಸ್ ಮತ್ತು ಕೇರಳ ಹೈಕೋರ್ಟ್ ಇದನ್ನು ಅಗತ್ಯ ಧಾರ್ಮಿಕ ಆಚರಣೆ ಎಂದರೆ ಕರ್ನಾಟಕ ಹೈಕೋರ್ಟ್ ಅದನ್ನು ಒಪ್ಪಿಲ್ಲ ಎಂದು ಹೇಳಿದರು.

ಕಲಂ 145(3)ರ ಕುರಿತಾದ ತಮ್ಮ ಮನವಿಯನ್ನು ಗಮನಿಸುವಂತೆ ನ್ಯಾಯಾಲಯಕ್ಕೆ ತಿಳಿಸಿ ವಕೀಲ ಕಾಮತ್ ವಾದ ಮುಕ್ತಾಯಗೊಳಿಸಿದರು.



Join Whatsapp