ಬೆಂಗಳೂರು: ನಗರ ವ್ಯಾಪ್ತಿಯಲ್ಲಿ 5ರಿಂದ 10 ಕಿ.ಮೀ. ಮತ್ತು ಹೊರಗೆ 60 ಕಿ.ಮೀ. ಅಂತರದೊಳಗೆ ಇರುವ ಟೋಲ್ ಕೇಂದ್ರಗಳು ಕಾನೂನುಬಾಹಿರ ಎಂದು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದು, ಇದೀಗ ಹೆದ್ದಾರಿ ಇಲಾಖೆಯು ಇಂತಹ 181 ಟೋಲ್ ಕೇಂದ್ರಗಳ ಪಟ್ಟಿ ಸಿದ್ಧಪಡಿಸಿ ಸಚಿವಾಲಯಕ್ಕೆ ರವಾನಿಸಿದೆ.
ಹೆದ್ದಾರಿ ಟೋಲ್ ನಿಯಮ 8ನ್ನು ಉಲ್ಲಂಘಿಸಿ ಕರ್ನಾಟಕದಲ್ಲೇ ಒಟ್ಟು 19 ಟೋಲ್ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 10 ಟೋಲ್ ಕೇಂದ್ರಗಳು ಸರಿಸುಮಾರು 50ರಿಂದ 59 ಕಿ.ಮೀ. ಅಂತರ ದಲ್ಲಿ ನಿರ್ಮಾಣವಾಗಿದ್ದರೆ, ಉಳಿದ 9 ಟೋಲ್ ಗೇಟ್‌ಗಳು ಕನಿಷ್ಠ 11ರಿಂದ 35 ಕಿ.ಮೀ. ಅಂತರದಲ್ಲಿ ನಿರ್ಮಾಣವಾಗಿವೆ ಎಂದು ವರದಿಗಳು ತಿಳಿಸಿವೆ.
ಇದರಲ್ಲಿ ಸುರತ್ಕಲ್ ಹೆಜಮಾಡಿ ಟೋಲ್ ಗೇಟ್ 11 ಕಿ.ಮೀ., ಕುಲುಮೆ ಪಾಳ್ಯ-ಬೆಂಗಳೂರು 12 ಕಿ.ಮೀ., ತಲಪಾಡಿ -ಸುರತ್ಕಲ್ 32 ಕಿ.ಮೀ., ಹೆಜಮಾಡಿ -ಗುಂಡ್ಮಿ 49 ಕಿ.ಮೀ., ಹೊಳೆಗದ್ದೆ-ಬೆಳಕೇರಿ 49 ಕಿ.ಮೀ., ಸಾಸ್ತಾನ- ಶಿರೂರು ನಡುವೆ 59 ಕಿ.ಮೀ. ನಡುವೆ ನಿರ್ಮಾಣವಾಗಿದೆ.