ಅಧಿಕ ತಾಪಮಾನ: ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಆರು ಯೋಧರು ಕುಸಿದು ಬಿದ್ದು ಸಾವು

Prasthutha|

ಉತ್ತರ ಪ್ರದೇಶ: ಉತ್ತರ ಪ್ರದೇಶದ ಮಿರ್ಜ್‌ಪುರ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಆರು ಭದ್ರತಾ ಸಿಬ್ಬಂದಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಮಿರ್ಜಾಪುರದಲ್ಲಿ ಲೋಕಸಭೆ ಚುನಾವಣೆಯ ಕೊನೆಯ ಹಂತದಲ್ಲಿ ಜೂನ್ 1ರಂದು ಮತದಾನ ನಡೆಯಲಿದೆ.

ಭದ್ರತೆಗಾಗಿ ಒಟ್ಟು 23 ಜನ ಯೋಧರು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಅವರಲ್ಲಿ 6 ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. 2 ಜವಾನರ ಸ್ಥಿತಿ ಗಂಭೀರವಾಗಿದೆ. ಮೃತರಿಗೆ ತೀವ್ರತರವಾದ ಜ್ವರವಿತ್ತು, ಅವರ ಬಿಪಿ ತೀವ್ರವಾಗಿತ್ತು ಮತ್ತು ಅವರ ಶುಗರ್ ಮಟ್ಟಗಳು ಇಲ್ಲಿಗೆ ಕರೆತರುವ ಮುನ್ನವೇ ಅವರು ಕುಸಿದು ಬಿದ್ದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

ಯೋಧರ ಸಾವಿಗೆ ತೀವ್ರ ಉಷ್ಟಾಂಶವೇ ಕಾರಣ ಎನ್ನಲಾಗಿದೆ. ಉತ್ತರ ಭಾರತದಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಏರುತ್ತಿದೆ. ಉಷ್ಣಾಂಶದ ಪ್ರಮಾಣ 50 ಸೆಲ್ಸಿಯಸ್ ದಾಟುತ್ತಿದೆ. ಇದು ಜನರ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆ. ಸದ್ಯ ಯೋಧರ ಸಾವಿಗೂ ಅಧಿಕ ಉಷ್ಣಾಂಶವೇ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.

ಜಾರ್ಖಂಡ್‌ನಲ್ಲಿ ಅಧಿಕ ಬಿಸಿಲಿನ ಶಾಕಕ್ಕೆ ನಾಲ್ವರು ಮೃತಪಟ್ಟಿರುವ ಕುರಿತು ವರದಿಯಾಗಿದೆ. ಪಲಾಮುದಲ್ಲಿ ಮೂವರು ಮತ್ತು ಜಮ್ಶೆಡ್‌ಪುರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1,326 ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇವುಗಳಲ್ಲಿ ಇದುವರೆಗೆ 63 ಹೀಟ್ ಸ್ಟ್ರೋಕ್ ಪ್ರಕರಣಗಳು ದೃಢಪಟ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ (ಜಾರ್ಖಂಡ್) ಮಿಷನ್ ನಿರ್ದೇಶಕ ಡಾ ಅಲೋಕ್ ತ್ರಿವೇದಿ ತಿಳಿಸಿದ್ದಾರೆ.



Join Whatsapp