ವಿವಾದಿತ ಕಾನೂನುಗಳನ್ನು ವಿರೋಧಿಸಿ ಪ್ರತಿಭಟಿಸಿದ ಲಕ್ಷದ್ವೀಪದ ನಿವಾಸಿಗಳನ್ನು ಬಿಡುಗಡೆ ಮಾಡುವಂತೆ ಕೇರಳ ಹೈಕೋರ್ಟ್, ಲಕ್ಷದ್ವೀಪದ ಅಮಾನಿಯ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಗೆ ಸೂಚಿಸಿದೆ.ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಎ.ಮುಹಮ್ಮದ್ ಮುಶ್ತಾಖ್ ಮತ್ತು ಡಾ.ಕೌಸರ್ ಎಡಪ್ಪಗಥ ಅವರು ಲಕ್ಷದ್ವೀಪ ನಿವಾಸಿಯೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ನೀಡಿದ್ದಾರೆ.
ಪ್ರತಿಭಟನಾಕಾರರ ಅಪರಾಧಗಳು ಜಾಮೀನು ಪಡೆಯುವಂತಹದ್ದಾಗಿದ್ದರೂ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಯಾವುದೇ ಕಾರಣವಿಲ್ಲದೆ ಅವರನ್ನು ಬಂಧನದಲ್ಲಿಟ್ಟಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದರು.