ರಮೇಶ್ ಜಾರಕಿಹೊಳಿ ಮತ್ತು ಸಿಡಿ ಪ್ರಕರಣದ ಎಸ್ ಐ ಟಿ ತಂಡಕ್ಕೆ ಹೈಕೋರ್ಟ್ ನೋಟಿಸ್

Prasthutha|

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ರಮೇಶ್ ಜಾರಕಿಹೊಳಿ ಲೈಂಗಿಕ  ಸಿಡಿ ಪ್ರಕರಣವನ್ನು ಕೈಗೆತ್ತಿಕೊಂಡಿರುವ ವಿಶೇಷ ತನಿಖಾ ತಂಡದ ವಿರುದ್ದ ಯುವತಿ, ಎಸ್ ಐ ಟಿ ತಂಡದ ಮೇಲೆ ಆರೋಪಿಯು ಪ್ರಭಾವ ಬೀರಿದ್ದು ಆತನನ್ನು ರಕ್ಷಿಸಲಾಗುತ್ತಿದೆ ಮತ್ತು ತನ್ನನ್ನು ಆರೋಪಿ ಎಂಬಂತೆ ಬಿಂಬಿಸಿ ಚಾರಿತ್ರ್ಯ ವಧೆ ಮಾಡಲಾಗುತ್ತಿದೆ ಎಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಯುವತಿ ಅಪಾದಿಸಿದ್ದಾಳೆ.

- Advertisement -

ರಮೇಶ್ ಜಾರಕಿಹೊಳಿ ಮೊದಲಿಗೆ ಸೆಕ್ಸ್ ಸಿಡಿಯಲ್ಲಿರುವುದು ನಾನಲ್ಲ, ಅದು ನಕಲಿಯಾಗಿದೆ, ತನ್ನ ಫೋಟೋವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಆಕೆಯೊಂದಿಗೆ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಹೇಳುತ್ತಿದ್ದ ಆರೋಪಿ, ಎರಡು ತಿಂಗಳ ನಂತರ ಇದ್ದಕ್ಕಿದ್ದಂತೆ ಎಸ್ ಐಟಿ ಅಧಿಕಾರಿಗಳ ಮುಂದೆ ಹಾಜರಾಗಿ ವಿಡಿಯೋದಲ್ಲಿರುವುದು ನಾನೇ, ಆಕೆಯೊಂದಿಗೆ ಸಹಮತದ ಸೆಕ್ಸ್ ನಡೆದಿದೆ ಎಂದು ಹೇಳಿದ್ದರು. ಅವರ ಹೇಳಿಕೆ ಈ ಹಿಂದಿನ ಹೇಳಿಕೆಗಿಂತ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಪ್ರಾಥಮಿಕ ವಿಚಾರಣೆ ವೇಳೆಯಲ್ಲಿ ಆಕೆ ಆರೋಪಿಸಿದ್ದಳು

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಮುಂಚಿತವಾಗಿಯೇ ದಾಖಲಿಸಿರುವ ರೇಪ್ ಕೇಸಿನ ತನಿಖೆಯ ಹಾದಿ ತಪ್ಪಿಸಲು ಇದೊಂದು ಮಾರ್ಗವಾಗಿದೆ ಎಂದು ಯುವತಿ ಆರೋಪಿಸಿದ್ದಾಳೆ. ಎಫ್ ಐಆರ್ ರದ್ದುಪಡಿಸಬೇಕು ಮತ್ತು ಆತ ಸಲ್ಲಿಸಿರುವ ದೂರಿನ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವಂತೆ ಆಕೆ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದಾಳೆ.

- Advertisement -

ಯುವತಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್ ದತ್ ಯಾದವ್, ಮಾಜಿ ಸಚಿವ ಜಾರಕಿಹೊಳಿ ಮತ್ತು ಎಸ್ ಐಟಿಗೆ ನೋಟಿಸ್ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು ಜೂನ್ 21ಕ್ಕೆ ಮುಂದೂಡಿದೆ.

Join Whatsapp