ಬೆಂಗಳೂರು: ನಾನಾಗಲಿ, ಸಚಿವ ರಾಜಣ್ಣ, ಗೃಹ ಸಚಿವ ಪರಮೇಶ್ವರ್ ಅವರಾಗಲಿ ಡಿಸಿಎಂ ಮಾಡಿ ಎಂದು ಕೇಳುತ್ತಿಲ್ಲ. ಹೈಕಮಾಂಡ್ ಮಾಡಬೇಕೆಂದು ಅಲ್ಲಿ ಒತ್ತಡ ಇದೆ. ನಾವು ವೈಯಕ್ತಿಕವಾಗಿ ಕೇಳುತ್ತಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಮುನ್ನ ನಾವು ಏನಾಗಿದ್ದೇವು, ಜನ ಪಕ್ಷ ನೋಡಿ ತೀರ್ಮಾನ ಮಾಡುತ್ತಾರೆ. ಸಿಎಂ, ಡಿಸಿಎಂ ಆದರೆ ಜನ ಓಟು ಕೊಡುತ್ತಾರೆ ಎಂದು ಹೇಳುವುದಕ್ಕೆ ಆಗಲ್ಲ. ಡಿಸಿಎಂ ಮಾಡುವುದು, ಬಿಡುವುದು ಹೈಕಮಾಂಡ ತೀರ್ಮಾನ ಮಾಡುತ್ತದೆ. ನಾನೇನು ಆಕಾಂಕ್ಷಿಯಲ್ಲ, ಪಕ್ಷ ಮೊದಲು ತೀರ್ಮಾನ ಮಾಡಬೇಕು. ನಮ್ಮನ್ನು ಕೇಳಿ ಮಾಡುವುದಿಲ್ಲ, ಯಾರು ಮಾಡಬೇಕೆಂದು ಅವರು ತೀರ್ಮಾನ ಮಾಡುತ್ತಾರೆ. ಕಾದು ನೋಡೋಣ, ನಾವು ಆಕಾಂಕ್ಷಿಯಲ್ಲ ಎಂದಿದ್ದಾರೆ.