ಬಿಜೆಪಿ ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ: ಸಿದ್ದರಾಮಯ್ಯ ಬೆನ್ನಿಗೆ ನಿಂತ ಹೈಕಮಾಂಡ್

Prasthutha|

- Advertisement -

ನವದೆಹಲಿ: ಬಿಜೆಪಿ ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ. ಕಾನೂನು ಹೋರಾಟ ಮೂಲಕವೇ ಉತ್ತರ ನೀಡಿ ಎಂದು ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಸಲಹೆ ನೀಡಿದೆ.

ಮುಡಾ ಹಗರಣ ಸಂಬಂಧ ಹೈಕಮಾಂಡ್​ ಬುಲಾವ್ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಇತರೆ ರಾಜ್ಯ ನಾಯಕರು, ದೆಹಲಿಗೆ ತೆರಳಿ ಮಾತುಕತೆ ನಡೆಸಿದರು. ಈ ವೇಳೆ ಪ್ರಸಕ್ತ ಕರ್ನಾಟಕ ರಾಜ್ಯ ರಾಜಕಾರಣದ ಬಗ್ಗೆ ಹೈಕಮಾಂಡ್​ ನಾಯಕರ ಮುಂದೆ ವಿವರಿಸಿದ್ದಾರೆ.

- Advertisement -

ಅಲ್ಲದೇ ಮುಡಾ ಹಗರಣದ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಸಂಪೂರ್ಣ ವಿವರ ನೀಡಿದ್ದಾರೆ.

ಸಭೆ ಬಳಿಕ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಹೈಕಮಾಂಡ್ ನಾಯಕರಿಗೆ ಧನ್ಯವಾದ ಹೇಳುತ್ತೇನೆ. ಹೈಕಮಾಂಡ್​ಗೆ ರಾಜ್ಯದ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದ್ದೇವೆ. ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ರಾಜ್ಯಪಾಲರ ನಡೆ ಅಸಾಂವಿಧಾನಿಕವಾಗಿದೆ ಎಂದು ಹೇಳಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯಿಸಿ, ರಾಜ್ಯಪಾಲರ ಮೂಲಕ ಸರ್ಕಾರವನ್ನು ಅಭದ್ರಗೊಳಿಸುವ ಯತ್ನಿಸಲಾಗುತ್ತಿದೆ. ಇಡೀ ಪಕ್ಷ ಸಿಎಂ ಜೊತೆ ನಿಲ್ಲುತ್ತೆ. ನಿಮ್ಮ ಜೊತೆ ನಾವು ನಿಲ್ಲುತ್ತೇವೆ ಎಂದು ಹೈಕಮಾಂಡ್ ಭರವಸೆ ನೀಡಿದೆ. ಎಲ್ಲಾ ವಿಚಾರಗಳನ್ನು ಹೈಕಮಾಂಡ್‌ಗೆ ಮನದಟ್ಟು ಮಾಡಿದ್ದೇವೆ. ಇದು ಸಿಎಂ ವಿರುದ್ಧದ ದಾಳಿಯಲ್ಲ, ಗ್ಯಾರಂಟಿ ವಿರುದ್ಧದ ದಾಳಿ. ನಾವೆಲ್ಲಾ ಒಟ್ಟಾಗಿ ಸಿಎಂ ಜೊತೆ ಇದ್ದೇವೆ, ಇಡೀ ಪಕ್ಷ ಸಿಎಂ ಜೊತೆಯಿದೆ ಎಂದಿದ್ದಾರೆ.



Join Whatsapp