ಬೆಂಗಳೂರು: ಹೈಕಮಾಂಡ್ ನೀಡುವ ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ, ಅದಕ್ಕಾಗಿ ತೆಲಂಗಾಣಕ್ಕೆ ಹೋಗುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹಿನ್ನೆಲೆ ತೆಲಂಗಾಣದಲ್ಲಿ ಕೈ ಅಭ್ಯರ್ಥಿಗಳಿಗೆ ಆಪರೇಷನ್ ಯತ್ನ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಹೋಗುವುದಿಲ್ಲ ಅಂತ ಹೇಳುತ್ತಿಲ್ಲ. ತೆಲಂಗಾಣದ ರಾಜಧಾನಿ ಹೈದರಾಬಾದ್ಗೆ ಹೋಗುತ್ತೇನೆ. ನಮ್ಮ ಕ್ಯಾಂಡಿಡೇಟ್ ಎಲ್ಲಾ ತಿಳಿಸಿದ್ದಾರೆ. ಯಾರ್ಯಾರು ಸಂಪರ್ಕ ಮಾಡುತ್ತಿದ್ದಾರೆ ಅನ್ನೋದನ್ನೂ ತಿಳಿಸಿದ್ದಾರೆ.
ನಾವು ಕೂಡ ಜಾಗೃತಿಯಿಂದ ಇದ್ದೇವೆ ಎಂದು ಹೇಳಿದರು. ನಾಳೆ ಚುನಾವಣೆ ಫಲಿತಾಂಶ ಇದೆ. ಫಲಿತಾಂಶ ಬರಲಿ ನಂತರ ಅದರ ಬಗ್ಗೆ ಮಾತನಾಡುತ್ತೇನೆ. ನಾನು ಹೋಗುತ್ತಿರುವುದು ಕನಕಪುರಕ್ಕೆ, ಜನಸಂಪರ್ಕ ಸಭೆ ಮಾಡೋದಕ್ಕೆ ಹೋಗುತ್ತಿದ್ದೇನೆ. ನಮ್ಮ ಕ್ಷೇತ್ರದ ಜನರ ಜೊತೆ ಮಾತನಾಡಿಲ್ಲ. ಅಸೆಂಬ್ಲಿ ಶುರುವಾಗುತ್ತಿದೆ, 10 ದಿನ ಬೆಳಗಾವಿಗೆ ಹೋಗಬೇಕು. ಅದಕ್ಕಿಂತ ಮೊದಲು ನಮ್ಮ ಕ್ಷೇತ್ರದ ಜನರ ಬಳಿ ಮಾತನಾಡಿಕೊಂಡು ಬರುತ್ತೇನೆ ಎಂದರು.