ಇನ್ನು ಮುಂದೆ ತೆಲಂಗಾಣದ ರಾಜಧಾನಿಯಾಗಿ ಮಾತ್ರ ಕಾರ್ಯನಿರ್ವಹಿಸಲಿರುವ ಹೈದರಾಬಾದ್

Prasthutha|

ಹೈದರಾಬಾದ್: ಇನ್ನು ಮುಂದೆ ಆಂಧ್ರ ಪ್ರದೇಶಕ್ಕೂ ಹೈದರಾಬಾದ್‌ಗೂ ರಾಜಧಾನಿಯ ವಿಚಾರವಾಗಿ ಯಾವುದೇ ಸಂಬಂಧ ಇರುವುದಿಲ್ಲ. ಎರಡು ತೆಲುಗು ರಾಜ್ಯಗಳ ಜಂಟಿ ರಾಜಧಾನಿಯಾಗಿದ್ದ ಹೈದರಾಬಾದ್ ಇನ್ನು ಮುಂದೆ ತೆಲಂಗಾಣದ ರಾಜಧಾನಿಯಾಗಿ ಮಾತ್ರ ಕಾರ್ಯನಿರ್ವಹಿಸಲಿದೆ.

- Advertisement -

2014 ರ ಆಂಧ್ರಪ್ರದೇಶ ಮರುಸಂಘಟನೆ ಕಾಯಿದೆಯ ಪ್ರಕಾರ, ಇನ್ನು ಮುಂದೆ ಹೈದರಾಬಾದ್ ತೆಲಂಗಾಣ ರಾಜ್ಯದ ರಾಜಧಾನಿಯಾಗಿರುತ್ತದೆ ಮತ್ತು ಆಂಧ್ರ ಪ್ರದೇಶ ರಾಜ್ಯಕ್ಕೆ ಹೊಸ ರಾಜಧಾನಿ ಇರುತ್ತದೆ.

ಏಕೀಕೃತ ಆಂಧ್ರಪ್ರದೇಶ ಫೆಬ್ರವರಿ 2014ರಲ್ಲಿ ವಿಂಗಡನೆಯಾಗಿದೆ. 2014ರಲ್ಲಿ ಸಂಸತ್ತಿನಲ್ಲಿ ಎಪಿ ಮರು ಸಂಘಟನೆ ಮಸೂದೆಯನ್ನು ಅಂಗೀಕರಿಸಿದ ನಂತರ, ಅದೇ ವರ್ಷದ ಜೂನ್ 2ರಂದು ಅಧಿಕೃತವಾಗಿ ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬಂದಿತ್ತು. ಆಗ ಹೈದರಾಬಾದನ್ನು 10 ವರ್ಷಗಳ ಅವಧಿಗೆ ಎರಡೂ ರಾಜ್ಯಗಳಿಗೆ ರಾಜಧಾನಿಯಾಗಿ ಸ್ವೀಕರಿಸಲಾಗಿತ್ತು. 10 ವರ್ಷದ ನಂತರ ಇದು ಹೀಗೆ ಮುಂದುವರೆಯುವಂತಿಲ್ಲ ಎಂದೂ ತೀರ್ಮಾನವಾಗಿತ್ತು. ಆ ತೀರ್ಮಾನದಂತೆ ಇನ್ನು ಮುಂದೆ ಹೈದರಾಬಾದ್ ತೆಲನಗಾಣದ ಮಾತ್ರ ರಾಜಧಾನಿಯಾಗಿ ಕಾರ್ಯನಿರ್ವಹಿಸಲಿದೆ.



Join Whatsapp