ಹೆಲಿಕಾಪ್ಟರ್‌ ಖರೀದಿ ಒಪ್ಪಂದ ರದ್ದು : “ಮೇಕ್‌ ಇನ್‌ ಇಂಡಿಯಾ’ ಯೋಜನೆಗೆ ಉತ್ತೇಜನ

Prasthutha|

ಹೊಸದಿಲ್ಲಿ: ರಷ್ಯಾ ಜತೆಗೆ ಮಾಡಿಕೊಂಡಿದ್ದ 48 ಹೆಲಿಕಾಪ್ಟರ್‌ ಗಳ ಖರೀದಿ ಒಪ್ಪಂದವನ್ನು ಭಾರತೀಯ ವಾಯುಪಡೆ (ಐಎಎಫ್) ರದ್ದುಗೊಳಿಸಲಾಗಿದೆ ಎಂದು ಕೇಂದ್ರದ ಮೂಲಗಳಿಂದ ತಿಳಿದು ಬಂದಿದೆ.

- Advertisement -

ಹತ್ತು ವರ್ಷಗಳ ಹಿಂದೆ, ಮಧ್ಯಮ ಕ್ರಮಾಂಕದ ಲಿಫ್ಟರ್‌ಗಳಾಗಿರುವ “ಎಂಐ-47 ವಿ 5′ ಮಾದರಿಯ 80 ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಒಪ್ಪಂದಕ್ಕೆ ಭಾರತ, ರಷ್ಯಾ ಸಹಿ ಹಾಕಿದ್ದವು. ಅವುಗಳಲ್ಲಿ 32 ಹೆಲಿಕಾಪ್ಟರ್‌ಗಳು ಈಗಾಗಲೇ ಭಾರತಕ್ಕೆ ನಾನಾ ಬ್ಯಾಚ್‌ಗಳಲ್ಲಿ ಆಗಮಿಸಿ ಐಎಎಫ್ ಗೆ  ಹಸ್ತಾಂತರಗೊಂಡಿವೆ. ಈ ಹೆಲಿಕಾಪ್ಟರ್‌ಗಳನ್ನು ದೇಶೀಯವಾಗಿಯೇ ತಯಾರಿಸಲು ಕೇಂದ್ರ ಉದ್ದೇಶಿಸಿರುವುದರಿಂದ ಇನ್ನುಳಿದ 48 ಹೆಲಿಕಾಪ್ಟರ್‌ಗಳ ಖರೀದಿ ಪ್ರಕ್ರಿಯೆಯನ್ನು ನಿಲ್ಲಿಸಲು ಐಎಎಫ್ ಉದ್ದೇಶಿಸಿದೆ.

“ಮೇಕ್‌ ಇನ್‌ ಇಂಡಿಯಾ’ ಯೋಜನೆಯಡಿ, ಭಾರತದ ರಕ್ಷಣಾ ಪರಿಕರ ಉತ್ಪಾದನಾ ವಲಯವನ್ನು ಸಂಪೂರ್ಣವಾಗಿ ಸ್ವಾವಲಂಬಿಯಾಗಿಸುವ ಉದ್ದೇಶದಿಂದ ಈ ಒಪ್ಪಂದವನ್ನು ರದ್ದುಪಡಿಸಲಾಗಿದೆ.



Join Whatsapp