ಹೆಲಿಕಾಪ್ಟರ್ ಪತನ: ಅನಗತ್ಯ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರಿದ ನೇಪಾಳ

Prasthutha|

ನೇಪಾಳ; ಮೌಂಟ್ ಎವರೆಸ್ಟ್ ಬಳಿ ಹೆಲಿಕಾಪ್ಟರ್ ಪತನ 6 ಮಂದಿ ಮೃತಪಟ್ಟ ಬಳಿಕ ನೇಪಾಳ ಸರ್ಕಾರ ಕೆಲವು ನಿರ್ಬಂಧಗಳನ್ನು ವಿಧಿಸಿದೆ.

- Advertisement -

ಅನಗತ್ಯ ವಿಮಾನಗಳ ಹಾರಾಟವನ್ನು 2 ತಿಂಗಳವರೆಗೆ ನಿಷೇಧಿಸಿದೆ. ಈ ನಿರ್ಬಂಧವು ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೂ ಅನ್ವಯಿಸುತ್ತದೆ.

ಪೂರ್ವ ನೇಪಾಳದ ಮೌಂಟ್ ಎವರೆಸ್ಟ್ ಬಳಿ ಖಾಸಗಿ ವಾಣಿಜ್ಯ ಹೆಲಿಕಾಪ್ಟರ್ ಪತನಗೊಂಡಿದ್ದು, ಮೆಕ್ಸಿಕನ್ ಕುಟುಂಬದ ಐದು ಸದಸ್ಯರು ಮತ್ತು ಪೈಲಟ್ ಸಾವನ್ನಪ್ಪಿದ್ದಾರೆ.