ರಬತ್: ಸಹರಾ ಮರಭೂಮಿಯಲ್ಲಿ ಭಾರೀ ಮಳೆಯಾಗುತ್ತಿದ್ದು 50 ವರ್ಷದ ಬಳಿಕ ಕೆರೆಗಳು ಭರ್ತಿಯಾಗುತ್ತಿವೆ.
ಉತ್ತರ ಆಫ್ರಿಕಾದಲ್ಲಿ ವಿಸ್ತಾರವಾಗಿ ಹರಡಿರುವ ಸಹರಾ ಮರಭೂಮಿಯಲ್ಲಿ ಈಗ ದಿಢೀರ್ ಮಳೆಯಾಗುತ್ತಿದೆ
ಆಗ್ನೇಯ ಮೊರಾಕ್ಕೊದಲ್ಲಿ ಎರಡು ದಿನಗಳ ಧಾರಾಕಾರ ಮಳೆಯ ನಂತರ ಸಹರಾ ಮರುಭೂಮಿಯ ಕೆಲವು ಭಾಗಗಳಲ್ಲಿ ತೀವ್ರ ಪ್ರವಾಹ ಸೃಷ್ಟಿಯಾಗಿದೆ.
ಮೊರಕ್ಕೊ ರಾಜಧಾನಿ ರಬತ್‌ನ ದಕ್ಷಿಣಕ್ಕೆ 450 ಕಿಮೀ ದೂರದಲ್ಲಿರುವ ಟಗೌನೈಟ್ ಗ್ರಾಮದಲ್ಲಿ ಸೆಪ್ಟೆಂಬರ್‌ನಲ್ಲಿ ಕೇವಲ 24 ಗಂಟೆಗಳಲ್ಲಿ 100 ಮಿ.ಮೀ ಮಳೆಯಾಗಿತ್ತು ಎಂದು ಮೊರಾಕ್ಕೊದ ಹವಾಮಾನ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇಷ್ಟು ಕಡಿಮೆ ಅವಧಿಯಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದನ್ನು ನಾವು ಇಲ್ಲಿಯವರೆಗೆ ನೋಡಿಲ್ಲ. 30-50 ವರ್ಷಗಳ ಹಿಂದೆ ಸ್ವಲ್ಪ ಮಳೆಯಾಗಿತ್ತು ಎಂದು ಮೊರಾಕ್ಕೊದ ಹವಾಮಾನ ಸಂಸ್ಥೆಯ ಅಧಿಕಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.