ಮುಂಬೈ: ಭಾರಿ ಮಳೆ ಹಿನ್ನೆಲೆ ಮುಂಬೈನಲ್ಲಿ ಕೇಂದ್ರ ರೈಲ್ವೆ ಮಾರ್ಗಗಳಲ್ಲಿ ಸ್ಥಳೀಯ ರೈಲು ಸೇವೆ ಹಾಗೂ ವಿಮಾನ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಮಳೆ ಹಿನ್ನೆಲೆಯಲ್ಲಿ ನಗರದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಮತ್ತು ಥಾಣೆ ನಡುವಿನ ಮುಖ್ಯ ಕಾರಿಡಾರ್ನ ಮಾರ್ಗ ಜಲಾವೃತವಾಗಿರುವ ಕಾರಣ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೆಯ (CR) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವಪ್ನಿಲ್ ನಿಲಾ ತಿಳಿಸಿದ್ದಾರೆ.