ಮಂಗಳೂರು: ನಗರ ಸೇರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮಳೆ ಹೆಚ್ಚಾಗಿದ್ದು, ರಸ್ತೆಗಳು ನದಿಯಂತಾಗಿದೆ.
ಇಂದು ಮಧ್ಯಾಹ್ನದಿಂದ ಶುರುವಾದ ಮಳೆ ನಿರಂತರವಾಗಿ ಸುರಿಯುತ್ತಿದೆ.
ನಗರಕ್ಕೆ ಪ್ರವೇಶ ಕಲ್ಪಿಸುವ ಪಡೀಲ್, ಪಂಪ್ ವೆಲ್, ಪಾಂಡೇಶ್ವರ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಪಂಪ್ವೆಲ್ ಮೇಲ್ಸೇತುವೆ ಕೆಳಗೆ ಪ್ರವಾಹದ ನೀರು ಮೊಣಕಾಲು ಎತ್ತರಕ್ಕೆ ಏರಿದ್ದು, ಮಂಗಳೂರು ಕಡೆಗೆ ಹೋಗುವ ಮಾರ್ಗವನ್ನು ನಿರ್ಬಂಧಿಸಿದ್ದು, ನಗರಕ್ಕೆ ಹೋಗುವ ವಾಹನಗಳು ಜಂಕ್ಷನ್ನಲ್ಲಿ ಗಂಟೆಗಟ್ಟಲೆ ಸಿಲುಕಿಕೊಂಡಿವೆ. ಕೊಟ್ಟಾರ ಚೌಕಿ ಜಂಕ್ಷನ್ ಕೂಡ ಜಲಾವೃತವಾಗಿದೆ.