ಇಂಡೊನೇಶ್ಯಾದಲ್ಲಿ ಭಾರೀ ಮಳೆ: ಭೂಕುಸಿತಕ್ಕೆ 14 ಮಂದಿ ಮೃತ

Prasthutha|

ಜಕಾರ್ತ: ಇಂಡೊನೇಶ್ಯಾದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಸುಲಾವೆಸಿ ದ್ವೀಪದಲ್ಲಿ ಭೂಕುಸಿತ ಸಂಭವಿಸಿ ಕನಿಷ್ಠ 14 ಮಂದಿ ಮೃತಪಟ್ಟಿರುವುದಾಗಿ ವಿಪತ್ತು ನಿರ್ವಹಣಾ ಏಜೆನ್ಸಿಯ ಅಧಿಕಾರಿಗಳು ಹೇಳಿದ್ದಾರೆ.

- Advertisement -

ದಕ್ಷಿಣ ಸುಲಾವೆಸಿ ದ್ವೀಪದ ತನಾ ತೊರಾಜ ಪ್ರದೇಶದಲ್ಲಿ ಕೆಲ ದಿನಗಳಿಂದ ಮಳೆ ಸುರಿಯುತ್ತಿದೆ. ಎರಡು ಗ್ರಾಮಗಳು ಜಲಾವೃತಗೊಂಡು 4 ಮನೆಗಳು ಹಾನಿಗೊಂಡಿವೆ.

ಮಳೆ ಮುಂದುವರಿದಿರುವುದರಿಂದ ಹಾಗೂ ರಸ್ತೆ ಸಂಚಾರಕ್ಕೆ ತೊಡಕಾಗಿರುವುದರಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಇಂಡೊನೇಶ್ಯಾದಲ್ಲಿ ಜನವರಿಯಿಂದ ಮಳೆಗಾಲ ಆರಂಭಗೊಂಡಿದ್ದು, ಸುಮಾತ್ರ ದ್ವೀಪದಲ್ಲಿ ಕಳೆದ ತಿಂಗಳು ನೆರೆ ಮತ್ತು ಪ್ರವಾಹದಿಂದ 26 ಮಂದಿ ಸಾವನ್ನಪ್ಪಿದ್ದರು.



Join Whatsapp