ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಗೆ ಭೂಕುಸಿತ, ಮನೆಗಳು ಧರಾಶಾಹಿ

Prasthutha|

ಕುಲು: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಕುಲು ಜಿಲ್ಲೆಯ ಅನ್ನಿ ಪಟ್ಟಣದಲ್ಲಿ ಭೂಕುಸಿತದಿಂದ ಹಲವಾರು ಮನೆಗಳು ಏಕಕಾಲದಲ್ಲಿ ನೆಲಸಮವಾಗಿವೆ.

- Advertisement -


ಇದರ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಗುಡ್ಡದ ಮೇಲೆ ನಿರ್ಮಿಸಲಾಗಿರುವ ಮನೆಗಳು ಧರೆ ಕುಸಿತದಿಂದ ಉದುರಿ ಬೀಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.

- Advertisement -


ಮಳೆ ಬಿದ್ದ ಹಿನ್ನೆಲೆಯಲ್ಲಿ ಅನ್ನಿ ಪಟ್ಟಣದ ಗುಡ್ಡದ ಮೇಲಿದ್ದ ಮನೆಗಳು ಅಪಾಯದಲ್ಲಿರುವುದನ್ನು ಗುರುತಿಸಲಾಗಿತ್ತು. ವಾರದ ಹಿಂದೆಯೇ ಸ್ಥಳೀಯ ಆಡಳಿತ ನೋಟಿಸ್ ನೀಡಿ, ನಿವಾಸಿಗಳನ್ನು ಖಾಲಿ ಮಾಡಿಸಿತ್ತು. ಹೀಗಾಗಿ ಯಾವುದೇ ಸಾವು – ನೋವುಗಳು ದಾಖಲಾಗಿಲ್ಲ.



Join Whatsapp