ಮಡಿಕೇರಿಯಲ್ಲಿ ದಿಢೀರ್ ಸುರಿದ ಮಳೆ: ಅಂಗಡಿ, ಮನೆಗಳಿಗೆ ನುಗ್ಗಿದ ನೀರು

Prasthutha|

ಮಡಿಕೇರಿ: ಮಡಿಕೇರಿ ನಗರದಲ್ಲಿ ಗುರುವಾರ ಸಂಜೆ ಧಾರಾಕಾರ ಮಳೆಯಾಗಿದೆ. ಸತತ ಒಂದು ಗಂಟೆಗಳ ಕಾಲ ಎಡೆಬಿಡದೆ ಸುರಿದ ಮಳೆಯಿಂದ ನೀರು ಉಕ್ಕಿ ಹರಿದು ಮನೆಗಳು ಮತ್ತು ಅಂಗಡಿಗಳಿಗೆ ನುಗ್ಗಿವೆ.

- Advertisement -

ಹಲವು ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ಅಡಚಣೆ ಉಂಟಾಯಿತು. ದಿಢೀರ್ ಆಗಿ ಸುರಿದ ಭಾರೀ ಮಳೆ ಆತಂಕವನ್ನು ಸೃಷ್ಟಿಸಿತ್ತಲ್ಲದೆ, ಕೆಲವು ಕಡೆ ಹಾನಿ ಉಂಟು ಮಾಡಿದೆ. ಕೈಗಾರಿಕಾ ಬಡಾವಣೆ, ಕಾವೇರಿ ಲೇಔಟ್, ಪತ್ರಿಕಾಭವನ ವ್ಯಾಪ್ತಿಯಲ್ಲಿ ಪ್ರವಾಹದ ರೀತಿಯಲ್ಲಿ ಚರಂಡಿಗಳು ತುಂಬಿ ರಸ್ತೆಯಲ್ಲಿ ನೀರು ಹರಿದಿದೆ. ಕಾವೇರಿ ಲೇಔಟ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮಳೆ ಅವಾಂತರವನ್ನು ಸೃಷ್ಟಿಸಿದ್ದು, ಮನೆಗಳಿಗೆ ನೀರು ನುಗ್ಗಿದೆ.

Join Whatsapp