ಬೆಂಗಳೂರು: ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣ ನೀಡುವ ಮೂಲಕ ಯುವಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಅತಿ ಅವಶ್ಯಕವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ವಿಶ್ವ ಹೆಪಟೈಟಿಸ್ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೆಪಟೈಟಿಸ್ ಸೋಂಕು ಆಹಾರ ಮತ್ತು ಜೀವನಶೈಲಿಯಲ್ಲಿ ಆಗುವ ಬದಲಾವಣೆಗಳಿಂದ ಬರುತ್ತದೆ. ಮಾನವನ ಅಂಗಾಂಗದಲ್ಲಿ ಯಕೃತ್ತಿಗೆ ನಾವು ಹೆಚ್ಚು ಪ್ರಾಮುಖ್ಯತೆ ನೀಡಬೇಕಾಗಿದೆ. ಲಿವರ್ ಅನ್ನು ನಾವು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೋ ಅದು ನಮಗೆ ಅಷ್ಟೇ ಉತ್ತಮ ಆರೋಗ್ಯವನ್ನು ನೀಡುವಂತಹ ಒಂದು ಅಂಗಾಂಗವಾಗಿದೆ ಎಂದು ತಿಳಿಸಿದರು.
ಮಾನವನ ದೇಹದಲ್ಲಿ ಲಿವರ್ 500 ಕ್ಕೂ ಹೆಚ್ಚು ಕಾರ್ಯವನ್ನು ಮಾಡುವ ಪ್ರಮುಖ ಅಂಗಾಂಗ. A,B,C,D ಮತ್ತು E ರೀತಿಯ ಹೆಪಟೈಟಿಸ್ ವೈರಸ್ಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ B ಮತ್ತು C ವೈರಸ್ ಲಿವರ್ ಡ್ಯಾಮೇಜ್ ಮಾಡುವ ವೈರಸ್ಗಳಾಗಿದ್ದು, ಮಾರಕ ಕಾಯಿಲೆಯನ್ನು ಉಂಟುಮಾಡುತ್ತವೆ ಎಂದರು