ರಾತ್ರಿ ಪಾಳಿಯ ಕೆಲಸ ಮುಗಿಸಿ ಮನೆಗೆ ಬಂದ ಮುಖ್ಯಪೇದೆ ಸಾವು

Prasthutha|

ಬೆಂಗಳೂರು: ರಾತ್ರಿ ಪಾಳಿಯ ಕೆಲಸ ಮುಗಿಸಿ ಇಂದು ಬೆಳಗ್ಗೆ ಮನೆಗೆ ಬಂದ ಪೊಲೀಸ್ ಹೆಡ್ ಕಾನ್’ಸ್ಟೇಬಲ್’ವೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ದೇವನಹಳ್ಳಿಯಲ್ಲಿ ಸಂಭವಿಸಿದೆ.

- Advertisement -


ಹೆಬ್ಬಾಳ ಪೊಲೀಸ್ ಠಾಣೆಯ ಹೆಡ್ ಕಾನ್’ಸ್ಟೇಬಲ್ ವಿರೂಪಾಕ್ಷ ಗೌಡ ಮೃತಪಟ್ಟವರು. ನಿನ್ನೆ ರಾತ್ರಿ ಕೆಲಸಕ್ಕೆ ತೆರಳಿದ್ದ ವಿರೂಪಾಕ್ಷ ಗೌಡರು, ಇಂದು ಬೆಳಗ್ಗೆ ಮನೆಗೆ ಬಂದ ಕೆಲವೇ ಕ್ಷಣದಲ್ಲಿ ಎದೆನೋವಿನಿಂದ ಹಾಲ್’ನಲ್ಲೇ ಕುಸಿದು ಬಿದ್ದರು. ಕೂಡಲೇ ಕುಟುಂಬಸ್ಥರು ವಿರೂಪಾಕ್ಷ ಗೌಡರನ್ನು ಆಸ್ವತ್ರೆಗೆ ಕರೆದೊಯ್ದರಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

Join Whatsapp