ಹೆಚ್’ಡಿಕೆ ಅಸ್ತಿತ್ವ ಉಳಿಸಿಕೊಳ್ಳಲು ದೆಹಲಿಗೆ ತೆರಳಿ ಕಾಲಿಗೆ ಬಿದ್ದು ಬಂದಿದ್ದಾರೆ: ಪ್ರಿಯಾಂಕ್ ಖರ್ಗೆ

Prasthutha|

ಕಲಬುರಗಿ : ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಅಸ್ತಿತ್ವ ಉಳಿಸಿಕೊಳ್ಳಲು ದೆಹಲಿಗೆ ಹೋಗಿ ಬಿಜೆಪಿಯ ಎಲ್ಲಾ ಮುಖಂಡರಿಗೆ ಕಾಲಿಗೆ ಬಿದ್ದು ಬಂದಿದ್ದಾರೆ ಎಂದು ಚಿಂಚೋಳಿ ಜನಸ್ಪಂದನ ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

- Advertisement -


ರಾಜ್ಯದ ಹಿತದೃಷ್ಠಿಯಿಂದಲ್ಲ, ಪ್ರಧಾನಿ ಬಳಿ ಅವರ ಅಸ್ತಿತ್ವ ಉಳಿಸಿಕೊಳ್ಳಲು ಹೋಗಿದ್ದಾರಾ? ಅಥವಾ ಅವರು ಕಾವೇರಿ ವಿಚಾರ ಚರ್ಚೆ ಮಾಡಿದ್ರಾ? ಎಂದು ಪ್ರಶ್ನಿಸಿದರು.


ಹೋಮ್ ಮಿನಿಸ್ಟರ್ ಹತ್ತಿರ ಹೋದ್ರು. ಜೆ ಪಿ ನಡ್ಡಾ ಅವರ ಹತ್ತಿರ ಹೋದ್ರು. ಅಲ್ಲಿ ಜೆಡಿಎಸ್ ಬಗ್ಗೆ ಚರ್ಚೆ ಆಯ್ತ? ಅಥವಾ ಕರ್ನಾಟಕದ ಜನರ ಭವಿಷ್ಯದ ಬಗ್ಗೆಯೂ ಚರ್ಚೆ ಆಯ್ತ?. ಈಗ ಅವರೇ ಇದ್ದರಲ್ಲ ಅಧಿಕಾರದಲ್ಲಿ, ಡಬಲ್ ಇಂಜಿನ್ ಹೋಗಿ ತ್ರಿಬಲ್ ಇಂಜಿನ್ ಆಯ್ತಲ್ಲ? ಎಂದು ವಾಗ್ದಾಳಿ ನಡೆಸಿದರು.