ಇದು ರಾಮ ಸೇನೆನೋ, ರಾವಣ ಸೇನೆನೋ: ಹೆಚ್.ಡಿ ಕುಮಾರಸ್ವಾಮಿ ಪ್ರಶ್ನೆ

Prasthutha|

►► ರಾಜ್ಯದಲ್ಲಿ ಶಾಂತಿ ನೆಲೆಸಲು ಮುತಾಲಿಕ್’ನನ್ನು ಒದ್ದು ಒಳಗೆ ಹಾಕಿ

- Advertisement -

ಬಾಗಲಕೋಟೆ: ರಾಜ್ಯದಲ್ಲಿ ಆಝಾನ್ ವಿರುದ್ಧ ಹನುಮಾನ್ ಚಾಲೀಸಾ ಪಠಿಸುವ ಅಭಿಯಾನ ಕೈಗೊಂಡಿರುವ ಶ್ರೀರಾಮ ಸೇನೆ ಸಂಘಟನೆಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇಂದು ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ, ಇದು ರಾಮಸೇನೆಯೋ, ರಾವಣ ಸೇನೆಯೋ ಎಂದು ಪ್ರಶ್ನಿಸಿದ್ದಾರೆ.

ಮುತಾಲಿಕ್’ನನ್ನು ಒದ್ದು ಒಳಗಡೆ ಹಾಕದಿದ್ದರೆ ರಾಜ್ಯದಲ್ಲಿ ಸವ೯ಜನಾಂಗದ ಶಾಂತಿಯ ತೋಟ ನೆಲೆಸಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ವಿಷಯಗಳನ್ನು ಬೃಹದಾಕಾರವಾಗಿ ಬೆಳಯಲು ಸಕಾ೯ರ ಬಿಡಬಾರದು. ಇಂತಹದ್ದಕ್ಕೆ ಮೌನವಾಗಿ ಒಪ್ಪಿಗೆ ಸೂಚಿಸುವುದನ್ನು ಸರಕಾರ ನಿಲ್ಲಿಸಬೇಕು ಎಂದು ಅವರು ಕಿಡಿಕಾರಿದ್ದಾರೆ.

- Advertisement -

ಇಲ್ಲಿನ ಸಾಮರಸ್ಯ ಹಾಳಾದ ಬಳಿಕ ಅದನ್ನು ರಿಪೇರಿ ಮಾಡಲು ಸಾಧ್ಯವಿಲ್ಲ, ನಾನು ಬೆಳಿಗ್ಗೆಯಿಂದ ನೋಡುತ್ತಿದ್ದೇನೆ, ಇದೇನು ರಾಮ ಸೇನೆನೋ, ರಾವಣನ ಸೇನೆನೋ ಎಂದು ಪ್ರಶ್ನಿಸಿದ್ದಾರೆ.

Join Whatsapp