ಸರ್ಕಾರದ ದುರಾಡಳಿತದ ವಿರುದ್ಧ ಜನರೇ ದಂಗೆ ಏಳಬೇಕು: ಎಚ್’​ಡಿಕೆ ಕಿಡಿ

Prasthutha|

- Advertisement -

ಮಂಡ್ಯ: ಪೆಟ್ರೋಲ್​​​​, ಡೀಸೆಲ್ ದರ ಹೆಚ್ಚಳ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿಕಾರಿದ್ದು, ಸರ್ಕಾರದ ದುರಾಡಳಿತದ ವಿರುದ್ಧ ಜನರೇ ದಂಗೆ ಏಳಬೇಕು ಎಂದು ಹೇಳಿದ್ದಾರೆ.

ಚುಂಚನಗಿರಿಗೆ ಭೇಟಿ ನೀಡಿದ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಬೆಲೆ ಏರಿಕೆ ವಿಚಾರವಾಗಿ ವಾಗ್ದಾಳಿ ನಡೆಸಿದರು. ಬಿಜೆಪಿ ಜೆಡಿಎಸ್‌ ಪ್ರತಿಭಟನೆ ಮಾಡುವುದಕ್ಕಿಂತ ಸರ್ಕಾರದ ದುರಾಡಳಿತದ ವಿರುದ್ಧ ಜನರೇ ದಂಗೆ ಏಳಬೇಕು. ಜನರು ಪ್ರತಿಭಟಿಸುವ ಮೂಲಕ ಸರ್ಕಾರ ಎಚ್ಚರಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ.

- Advertisement -

ಗ್ಯಾರಂಟಿ ಮುಂದುವರೆಸಲು ಬೆಲೆ ಏರಿಕೆ ಮಾಡಿದ್ದಾಗಿ ಕಾಂಗ್ರೆಸ್ ಸಚಿವರೆ ಒಪ್ಪಿಕೊಂಡಿದ್ದಾರೆ. ಜನರಿಂದಲೇ ದುಡ್ಡು ವಸೂಲಿ ಮಾಡಿ ಜನರಿಗೆ ನೀಡಲು ಮುಂದಾಗಿದ್ದಾರೆ. ಯಾರದ್ದೋ ಯಾರಿಗೋ ದಾನ ಮಾಡ್ತಾರೆ ಎಂಬ ಗಾದೆ ಇದೆ ಅಲ್ಲ ಹಾಗೇ ಆಯ್ತು ಎಂದು ಹೇಳಿದ್ದಾರೆ.

Join Whatsapp