ರೆಸಾರ್ಟ್​​ ನಲ್ಲಿ ಕುಮಾರಸ್ವಾಮಿ ಸಹಿತ ಜೆಡಿಎಸ್ ಶಾಸಕರ ವಾಸ್ತವ್ಯ

Prasthutha|

- Advertisement -

ಚಿಕ್ಕಮಗಳೂರು: ಇಲ್ಲಿನ ರೆಸಾರ್ಟ್​​ ನಲ್ಲಿ ಮೂರು ದಿನಗಳ ಕಾಲ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಲಿದ್ದಾರೆ.

ನ.17 ರ ಮಧ್ಯಾಹ್ನ ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ಗೆ ಶಾಸಕರು ಆಗಮಿಸಲಿದ್ದಾರೆ. ನವೆಂಬರ್ 18 ರಂದು ಶಾಸಕ ಜೊತೆ ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ. ನ.19 ರಂದು ಸಿಲ್ವರ್ ಗೇಟ್ ರೆಸಾರ್ಟ್​​ ನಲ್ಲಿ ನಡೆಯುವ ಶಾಸಕ ಭೋಜೇಗೌಡ ಅವರ ಮಗಳ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಶಾಸಕರು ಭಾಗಿಯಾಗಲಿದ್ದಾರೆ.

Join Whatsapp