ಕುಮಾರಸ್ವಾಮಿ ಬಳಿ ಕ್ಷಮೆಯಾಚಿಸಿದ ಪುನೀತ್ ಕೆರೆಹಳ್ಳಿ

Prasthutha|

- Advertisement -

‘ನಿಮ್ಮನ್ನು ಟೀಕೆ ಮಾಡುವವರಿಗೆ ನಾವು ಉತ್ತರ ಕೊಡುತ್ತೇವೆ ಎಂದ ಕೊಲೆ ಆರೋಪಿ’

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಬಳಿ ಕೊಲೆ ಆರೋಪಿ ರಾಷ್ಟ್ರರಕ್ಷಣಾ ಪಡೆ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಕ್ಷಮೆಯಾಚಿಸಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಪುನೀತ್ ಕೆರೆಹಳ್ಳಿ, ಜೈ ಶ್ರೀ ರಾಮ್ ಹೇಳಿದ ಎಚ್‌.ಡಿ.ಕುಮಾರಸ್ವಾಮಿ ಅವರು ಧರ್ಮದ ಪರ ನಿಂತ ನಿಮ್ಮ ಟೀಕೆ ಮಾಡುವ ಗುಲಾಮರಿಗೆ ಉತ್ತರ ನಾವು ಕೊಡುತ್ತೇವೆ. ಧರ್ಮದ ಪರ ನಿಂತವರ ಹಿಂದೆ ಖಂಡಿತ ನಾವೆಲ್ಲ ಇರುತ್ತೇವೆ. ನಿಮ್ಮ ಬಗ್ಗೆ ನಾವು ಏನಾದರೂ ತಿಳಿಯದೆ ನಿಮ್ಮ ಮನ ನೋಹಿಸುವ ಮಾತಾಡಿದ್ದರೆ ನಿಮ್ಮಿಂದಲೂ ನಮಗೆ ಕ್ಷಮೆ ಇರಲಿ ಎಂದು ಬರೆದುಕೊಂಡಿದ್ದಾನೆ.

ಬಂಟ್ವಾಳದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶನಿವಾರ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿದ ಹೆಚ್‌ ಡಿಕೆ ಅವರು ಪ್ರಭಾಕರ ಭಟ್‌ ಅವರನ್ನು ಹಾಡಿ ಹೊಗಳಿದ್ದಾರೆ.

ಹಿಂದೆ ಒಂದು ರೀತಿಯಾಗಿ ಮಾತನಾಡುತ್ತಿದ್ದ ಕುಮಾರಸ್ವಾಮಿ ಈ ಕಾರ್ಯಕ್ರಮ ಭಾಗವಹಿಸಿದ್ದು ಹೇಗೆ ಎಂದು ಕೆಲವರು ಯೋಚಿಸಬಹುದು. ಅಂದು ನನ್ನನ್ನು ಕೆಲವರು ದಾರಿ ತಪ್ಪಿಸಿದ್ದರು. ನಾನು ತಪ್ಪು ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.

ಮಕ್ಕಳಿದ್ದಾಗ ರಾಮನ ಭಜನೆ ಮಾಡಿದನ್ನು ಇವತ್ತು ಮತ್ತೆ ನೆನಪಿಸಿದ್ದೀರಿ. ಪ್ರಭಾಕರ ಭಟ್ ಬದುಕಿನ ಒಳ್ಳೆಯ ನಡವಳಿಕೆ ಕಲಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಕಣ್ಣು ತೆರೆಸುತ್ತಿದ್ದೀರಿ ಎಂದು ಹೇಳಿದರು.



Join Whatsapp