ಲೋಕಸಭಾ ಚುನಾವಣೆ ಬಳಿಕ ಮಹಾರಾಷ್ಟ್ರದಂತೆ ಇಲ್ಲಿ ಯಾರು ಹುಟ್ಟುತ್ತಾರೋ?: ಹೆಚ್​ಡಿಕೆ

Prasthutha|

- Advertisement -

ಬೆಂಗಳೂರು: ಲೋಕಸಭಾ ಚುನಾವಣೆ ಮುಗಿಯಲಿ, ಮಹಾರಾಷ್ಟ್ರದಲ್ಲಿ ನಡೀತಲ್ವಾ ಹಾಗೆ ಇಲ್ಲಿ ಯಾರು ಹುಟ್ಟುತ್ತಾರೋ ಗೊತ್ತಿಲ್ಲ. ಈ ದೇಶದಲ್ಲಿ ಇವತ್ತಿನ ರಾಜಕಾರಣ ನೋಡಿದಾಗ ಏನು ಬೇಕಾದರೂ ನಡೆಯಬಹುದು. ಐವತ್ತು ಜನ ಕರೆದುಕೊಂಡು ನಿಮ್ಮ ಜತೆ ಬರುತ್ತೇನೆ ಎಂದು ಕೇಂದ್ರದ ನಾಯಕರ ಬಳಿ ರಾಜ್ಯ ನಾಯಕರೊಬ್ಬರು ಮಾತನಾಡಿದ್ದಾರೆ. ಹೀಗಾಗಿ ಈ ಸರ್ಕಾರ ಮುಂದೆ ಏನಾಗುತ್ತೋ ಲೋಕಸಭಾ ಚುನಾವಣಾ ಮುಗಿದ ಬಳಿಕ ಗೊತ್ತಾಗುತ್ತದೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಲೋಕಸಭಾ ಚುನಾವಣೆ ಆದಮೇಲೆ ಎಂದು ಅರ್ಜಿ ಹಾಕ್ಕೊಂಡು ಹೋಗಿದ್ದಾರೆ. 50-60 ಮಂದಿಯನ್ನು ಸಣ್ಣಪುಟ್ಟವರಿಂದ ಕರೆದುಕೊಂಡು ಹೋಗಲು ಆಗುತ್ತಾ? ದಾರು ತಿಂಗಳು ರಿಲೀಫ್ ಕೊಡಿ ಅಂತ ಹೋಗಿದ್ದು ಗೊತ್ತು ಎಂದು ಹೆಸರು ಹೇಳದೇ ಡಿಕೆ ಶಿವಕುಮಾರ್ ದೆಹಲಿ ಭೇಟಿ ಬಗ್ಗೆ ಸ್ಪೋಟಕ ಮಾಹಿತಿ ಬಚ್ಚಿಟ್ಟಿದ್ದಾರೆ.



Join Whatsapp