ಹಾಡಹಗಲೇ ಸಿನಿಮೀಯ ಮಾದರಿಯಲ್ಲಿ ಬ್ಯಾಂಕ್‌ ದರೋಡೆ : 1.19 ಕೋಟಿ ರೂ. ಹೊತ್ತೊಯ್ದ ಕಳ್ಳರು

Prasthutha|

ಪಾಟ್ನ : ಗನ್‌ ಗಳನ್ನು ಹಿಡಿದ ದರೋಡೆಕೋರರ ಗುಂಪೊಂದು ಸಿನಿಮೀಯ ಮಾದರಿಯಲ್ಲಿ ಹಾಡಹಗಲೇ ಬ್ಯಾಂಕ್‌ ದರೋಡೆ ಮಾಡಿದ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಹಾಜಿಪುರದಲ್ಲಿನ ಜಾದುಹದ ಎಚ್‌ ಡಿಎಫ್‌ ಸಿ ಬ್ಯಾಂಕ್‌ ಶಾಖೆಯಲ್ಲಿ ಈ ಘಟನೆ ನಡೆದಿದೆ.

- Advertisement -

ಈ ದರೋಡೆಯಲ್ಲಿ ಬರೋಬ್ಬರಿ 1.19 ಕೋಟಿ ರೂ. ಕೊಳ್ಳೆ ಹೊಡೆಯಲಾಗಿದೆ. ಕೇಂದ್ರದ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರ ನಿವಾಸದ ಬಳಿಯಲ್ಲೇ ಈ ಘಟನೆ ನಡೆದಿದೆ.

ಬೆಳಗ್ಗೆ ಶಾಖೆಯು ಸಾರ್ವಜನಿಕರ ಸೇವೆಗೆ ತೆರೆದ ಸ್ವಲ್ಪ ಹೊತ್ತಲ್ಲೇ 5 ಜನ ಬೈಕ್‌ ಗಳಲ್ಲಿ ಬ್ಯಾಂಕಿಗೆ ನುಗ್ಗಿದರು. ಸಿಬ್ಬಂದಿಯನ್ನು ಬೆದರಿಸಿ ಹಣವನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ದರೋಡೆ ಮಾಡಿಕೊಂಡುವ ಹೊರಹೋಗುವ ವೇಳೆ ದರೋಡೆಕೋರರ ಮುಖಗಳು ಸಿಸಿಟಿವಿಯಲ್ಲಿ ದಾಖಲಾಗಿವೆ ಎನ್ನಲಾಗಿದೆ. ಹೀಗಾಗಿ ಸಿಸಿಟಿವಿ ತುಣುಕುಗಳನ್ನು ಪರಿಶೀಲಿಸಲಾಗುತ್ತಿದೆ. ದರೋಡೆಕೋರರ ಪತ್ತೆಗೆ ಬಲೆ ಬೀಸಲಾಗಿದೆ.



Join Whatsapp