ಝಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Prasthutha|

ಮೈಸೂರು: ಸಚಿವ ಜಮೀರ್‌ ಅಹ್ಮದ್‌ ಮತ್ತು ಆ ನಾಲ್ವರ ಜತೆ ಇದ್ದದ್ದು ನನ್ನ ಜೀವನದ ಅತ್ಯಂತ ಕರಾಳ ದಿನಗಳು. ಅವನ್ನು ಕೊಚ್ಚೆ ಎಂದು ಈಗ ದೂರ ಇಟ್ಟಿದ್ದೇನೆ. ಕೊಚ್ಚೆಗಳ ಬಗ್ಗೆ ಪದೇ ಪದೆ ಯಾಕೆ ಮಾತನಾಡಿಸುತ್ತೀರಿ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

- Advertisement -

ಝಮೀರ್‌ ಹೇಳಿಕೆಗೆ ಸಂಬಂಧಿಸಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಆ ವ್ಯಕ್ತಿ ಬಗ್ಗೆ ನನ್ನ ಬಳಿ ಚರ್ಚೆ ಮಾಡಬೇಡಿ. ಅವರ ಸಹಿತ ಐದಾರು ಜನ ರೊಂದಿಗೆ ಸಂಬಂಧ ಬೆಳೆಸಿದ್ದು ನನ್ನ ಜೀವ ನದ ಕರಾಳ ಅಧ್ಯಾಯ. ಅಂತಹವರಿಂದ ದೂರ ಈಗ ಎಚ್ಚರಿಕೆಯಿಂದ ಇದ್ದೇನೆ ಎಂದರು.

ತಮಗೆ ಮೋಸ ಮಾಡಿದ ದಿನ ನಾನು ಏನಾಗುತ್ತೇನೆ ಎಂದು ನೂರು ಬಾರಿ ಝಮೀರ್‌ ಹೇಳಿದ್ದಾನೆ. ಆ ಪದ ಯಾವುದು ಎಂಬುದನ್ನು ನನ್ನ ಬಾಯಿಯಿಂದ ಹೇಳಿಸಬೇಡಿ. ಅದು ಅತ್ಯಂತ ಕೆಟ್ಟ ಪದ. ನನಗೆ ಅದನ್ನ ಸಾರ್ವಜನಿಕವಾಗಿ ಬಳಸಲು ಆಗುತ್ತಿಲ್ಲ. ಕುಮಾರಸ್ವಾಮಿ ಮತ್ತು ಜೆಡಿಎಸ್‌ ಕಥೆಯೇ ಮುಗಿಯಿತು ಅಂದುಕೊಂಡಿದ್ದರು. ಆದರೆ ಈಗ ಮತ್ತೆ ನಮಗೆ ಶಕ್ತಿ ಬಂದಿದೆ. ಅದನ್ನು ತಡೆದುಕೊಳ್ಳಲು ಆಗದೆ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.



Join Whatsapp