ತಬ್ಲೀಘಿ ಕಾರ್ಯಕ್ರಮದಲ್ಲಿ ಭಾಗಿಯಾದ ವ್ಯಕ್ತಿಯ ವಿರುದ್ಧ ಕೊಲೆ ಯತ್ನ ಆರೋಪ ; ಅಧಿಕಾರದ ದುರುಪಯೋಗ | ಅಲಹಾಬಾದ್ ಹೈಕೋರ್ಟ್

Prasthutha|

 ಅಲಹಾಬಾದ್ : ಕಳೆದ ಮಾರ್ಚ್ ನಲ್ಲಿ ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೌ ನಿವಾಸಿಯ ವಿರುದ್ಧ ಕೊಲೆ ಯತ್ನ ಆರೋಪ ಹೊರಿಸಿದ್ದುದು, ಕಾನೂನಿನ ಅಧಿಕಾರದ ದುರುಪಯೋಗ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

- Advertisement -

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೊದಲು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿಲ್ಲ, ಕಾರ್ಯಕ್ರಮದ ನಂತರ ಸ್ವಯಂ ಪ್ರೇರಿತವಾಗಿ ಕ್ವಾರಂಟೈನ್ ಗೆ ಒಳಗಾಗಿಲ್ಲ ಎಂಬ ಆರೋಪದಲ್ಲಿ ಪ್ರಕರಣ ಎದುರಿಸುತ್ತಿರುವ ಆರೋಪಿ ಮೊಹಮ್ಮದ್ ಸಾದ್ ವಿರುದ್ಧ ಕಲಂ 307ರ ಆರೋಪದಲ್ಲಿ ವಿಚಾರಣೆಗೆ ತಡೆ ನೀಡುತ್ತಾ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.  

ತಮ್ಮ ವಿರುದ್ಧ ಮೊದಲು ಐಪಿಸಿ ಕಲಂ 269 ಮತ್ತು 270ರಡಿ ಪ್ರಕರಣ ದಾಖಲಿಸಲಾಗಿತ್ತು, ಬಳಿಕ ಹೊಸ ದೋಷಾರೋಪ ಪಟ್ಟಿ ದಾಖಲಿಸಿ, ಕೊಲೆ ಯತ್ನ ಆರೋಪ ಮಾಡಲಾಗಿದೆ ಎಂದು ಸಾದ್ ಕೋರ್ಟ್ ಗೆ ತಿಳಿಸಿದ್ದರು.

- Advertisement -

ಕೊರೊನ ಸೋಂಕು ದೇಶದಲ್ಲಿ ಹರಡಲು ಆರಂಭವಾದ ದಿನಗಳಲ್ಲಿ ಮುಸ್ಲಿಮರ ವಿರುದ್ಧ ಅಪಪ್ರಚಾರ ನಡೆಸುವ ಉದ್ದೇಶದಿಂದ ಮಾಧ್ಯಮಗಳು ತಬ್ಲೀಘಿ ಜಮಾತ್ ನಲ್ಲಿ ಭಾಗವಹಿಸಿದ ಮುಸ್ಲಿಮ್ ಪ್ರತಿನಿಧಿಗಳ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಿದ್ದವು. ಅದರ ಆಧಾರದಲ್ಲಿ ಪೊಲೀಸರೂ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Join Whatsapp