ದಿಲೀಪ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್; ತನಿಖೆ ಮುಂದುವರಿಸಲು ಆದೇಶ

Prasthutha|

ಕೊಚ್ಚಿ: ನಟಿಯ ಮೇಲಿನ ಹಲ್ಲೆ ಪ್ರಕರಣದ ತನಿಖಾ ತಂಡವನ್ನು ಕೊಲ್ಲಲು ಸಂಚು ರೂಪಿಸಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ನಟ ದಿಲೀಪ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಅತ್ಯಂತ ನಿರ್ಣಾಯಕ ಅರ್ಜಿಯ ಮೇಲೆ ಹೈಕೋರ್ಟ್ ನ ಏಕಸದಸ್ಯ ಪೀಠವು ಈ ತೀರ್ಪು ನೀಡಿ ತನಿಖೆಯನ್ನು ಮುಂದುವರಿಸಲು ಅನುಮತಿ ನೀಡಿದೆ.

- Advertisement -

ನ್ಯಾಯಮೂರ್ತಿ ಝಿಯಾದ್ ರೆಹಮಾನ್ ನೇತೃತ್ವದ ಪೀಠವು ಈ ತೀರ್ಪು ನೀಡಿದ್ದು, ತನಿಖೆಯನ್ನು ಮುಂದುವರಿಸಲು ಹೈಕೋರ್ಟ್ ಅನುಮತಿ ನೀಡಿರುವುದು ದಿಲೀಪ್ ಗೆ ಹಿನ್ನಡೆಯಾಗಿದೆ.

ನಿರ್ದೇಶಕ ಬಾಲಚಂದ್ರ ಕುಮಾರ್ ಅವರು ಬಹಿರಂಗಪಡಿಸಿದ ನಂತರ ಕ್ರೈಂ ಬ್ರಾಂಚ್ ದಿಲೀಪ್ ವಿರುದ್ಧ ಮೊದಲ ಆರೋಪಿಯಾಗಿ ಕೊಲೆ ಪಿತೂರಿ ಪ್ರಕರಣವನ್ನು ದಾಖಲಿಸಿದೆ.

- Advertisement -

ದಿಲೀಪ್ ಸಹೋದರ ಅನೂಪ್ ಮತ್ತು ಭಾವ ಟಿ.ಎನ್. ಸೂರಜ್, ಸಂಬಂಧಿ ಅಪ್ಪು, ಸ್ನೇಹಿತ ಬೈಜು ಚೆಂಗಮನಾಡ್, ಅಲುವಾ ಮೂಲದ ಹೋಟೆಲ್ ಮಾಲೀಕ ಶರತ್ ಮತ್ತು ಡಿಜಿಟಲ್ ಪುರಾವೆಗಳನ್ನು ನಾಶಪಡಿಸಲು ಸಹಾಯ ಮಾಡಿದ ಸೈಬರ್ ತಜ್ಞ ಸಾಯಿ ಶಂಕರ್ ಈ ಪ್ರಕರಣದ ಇತರ ಆರೋಪಿಗಳಾಗಿದ್ದಾರೆ.



Join Whatsapp