ನವದೆಹಲಿ: ದೆಹಲಿಯ ಎನ್ ಸಿಟಿಯಲ್ಲಿ 2023 ರ ಜನವರಿ 1 ರವರೆಗೆ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂಬ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸ್ವೀಕರಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
ಸುಪ್ರೀಂ ಕೋರ್ಟ್ ನಲ್ಲಿ ಈ ಕುರಿತ ವಿಚಾರಣೆ ಬಾಕಿ ಇರುವುದರಿಂದ ನ್ಯಾಯಪೀಠವು ಈಗ ಈ ಅರ್ಜಿಯ ವಿಚಾರಣೆ ನಡೆಸುವುದು ಸೂಕ್ತವಲ್ಲ ಎಂದು ನ್ಯಾಯಮೂರ್ತಿ ಯಶವಂತ್ ವರ್ಮಾ ಹೇಳಿದರು.
ಅರ್ಜಿದಾರರಾದ ಶಿವ ಫೈರ್ವರ್ಕ್ ಮತ್ತು ಇತರರು ವಕೀಲರಾದ ಪ್ರಾಂಜಲ್ ಕಿಶೋರ್ ಮತ್ತು ಅಮನ್ ಬನ್ಸಾಲ್ ಅವರ ಮೂಲಕ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು ಹಸಿರು ಪಟಾಕಿಗಳ ಮಾರಾಟ, ಖರೀದಿ ಮತ್ತು ಸಂಗ್ರಹಣೆಯಲ್ಲಿ ತೊಡಗಿದ್ದಾರೆ.