ತೃತೀಯಲಿಂಗಿ ವಿದ್ಯಾರ್ಥಿಗೆ ಹಾಸ್ಟೆಲ್ ಕೊಠಡಿ ನೀಡದ ಪಂಜಾಬ್ ವಿವಿಗೆ ಹೈಕೋರ್ಟ್ ನೋಟಿಸ್

Prasthutha|

ಚಂಡೀಗಡ : ತನಗೆ ಹಾಸ್ಟೆಲ್ ಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ತೃತೀಯಲಿಂಗಿ ವಿದ್ಯಾರ್ಥಿನಿಯೊಬ್ಬಳು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.

- Advertisement -

ಅರ್ಜಿದಾರರಾದ ಯಶಿಕಾ, ತಮ್ಮ ವಕೀಲರಾದ ಮಣಿಂದರ್ ಜಿತ್ ಸಿಂಗ್ ಅವರ ಮೂಲಕ, ಎಂಎ ಕೋರ್ಸ್ ಗೆ ಪ್ರವೇಶ ಪಡೆದ ನಂತರ ಮತ್ತು ಈಗಾಗಲೇ ಮೊದಲ ಸೆಮಿಸ್ಟರ್ ಪೂರ್ಣಗೊಂಡಿದ್ದರೂ ಹಾಸ್ಟೆಲ್ ಸೌಕರ್ಯಗಳು ತನಗೆ ಲಭ್ಯವಾಗಿಲ್ಲ ಎಂದು ವಾದಿಸಿದ್ದಾರೆ.

  ಪ್ರತಿವಾದಿಯ ಪರ ವಕೀಲರು ತಮ್ಮ ಲಿಖಿತ ಹೇಳಿಕೆಗಳನ್ನು ಸಲ್ಲಿಸಲು ಸಮಯ ಕೋರಿದಾಗ, ನ್ಯಾಯಾಲಯವು ಏಪ್ರಿಲ್ 26 ಕ್ಕೆ ಪ್ರಕರಣವನ್ನು ಮುಂದೂಡಿತು.

- Advertisement -

ಸಹರಾನ್ ಪುರದವರಾದ ಯಾಶಿಕಾ ಅವರು ಪಂಜಾಬ್ ವಿಶ್ವವಿದ್ಯಾಲಯದ ಮಾನವ ಹಕ್ಕುಗಳು ಮತ್ತು ಕರ್ತವ್ಯಗಳು ಎಂಬ ವಿಷಯದಲ್ಲಿ ಎಂಎ ಪದವಿಗೆ ಅಕ್ಟೋಬರ್ 2021 ರಲ್ಲಿ ಸಂಪೂರ್ಣ ಶುಲ್ಕ ರಿಯಾಯತಿಯಲ್ಲಿ ಪ್ರವೇಶ ಪಡೆದಿದ್ದರು. ಹಾಸ್ಟೆಲ್ ನೀಡುವಂತೆ ಕಳೆದ ವರ್ಷ ಸೆಪ್ಟೆಂಬರ್ 28 ರಂದು ಅವರು ವಿಶ್ವವಿದ್ಯಾಲಯಕ್ಕೆ ಮನವಿ ಸಲ್ಲಿಸಿದ್ದರು.

ಅವರು ಅಕ್ಟೋಬರ್ 10 ರಂದು ಚಂಡೀಗಢ ಡೆಪ್ಯುಟಿ ಕಮಿಷನರ್ ಗೆ ಇದೇ ಕುರಿತು ಪತ್ರ ಬರೆದಿದ್ದರು. ಆದಾಗ್ಯೂ, ಪ್ರತಿಕ್ರಯಿಸದಿದ್ದರಿಂದ , ಅವರು ಅಕ್ಟೋಬರ್ 19 ರಂದು ಹೆಚ್ಚುವರಿ ಡೆಪ್ಯುಟಿ ಕಮಿಷನರ್ ಗೆ ಎರಡನೇ ಪತ್ರವನ್ನು ಬರೆದಿದ್ದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ಡಿಸೆಂಬರ್ 1 ರಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಪತ್ರ ಬರೆದಿದ್ದೇನೆ ಎಂದು ಯಶಿಕಾ ಹೇಳಿದ್ದಾರೆ.



Join Whatsapp