ಅಝಾನ್ ಗೆ ಧ್ವನಿವರ್ಧಕ ಬಳಸಿದರೆ ಶಬ್ಧಮಾಲಿನ್ಯವಾಗುತ್ತದೆ ಎನ್ನುವುದು ತಪ್ಪು ಕಲ್ಪನೆ: ಬಜರಂಗದಳ ಮುಖಂಡನ ಅರ್ಜಿ ತಳ್ಳಿಹಾಕಿದ ಹೈಕೋರ್ಟ್

Prasthutha|

ನವದೆಹಲಿ: ಅಝಾನ್ ಗೆ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸುವಂತೆ ಕೋರಿ ಬಜರಂಗದಳದ ನಾಯಕ ಶಕ್ತಿಸಿಂಹ ಝಾಲಾ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದ್ದು, ಮನವಿಯನ್ನು ಸಂಪೂರ್ಣವಾಗಿ ತಪ್ಪು ಕಲ್ಪನೆ ಎಂದು ಹೇಳಿದೆ.

- Advertisement -


ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಅನಿರುದ್ಧಮಯೀ ಅವರ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಈ ರೀತಿಯ ಪಿಐಎಲ್ (PIL) ಸಲ್ಲಿಕೆ, ಧ್ವನಿವರ್ಧಕಗಳ ಮೂಲಕ ಕೂಗುವುದರಿಂದ ಉಂಟಾಗುವ ಶಬ್ದದ ಪ್ರಮಾಣ ಎಷ್ಟು? ಇದರಿಂದ ಶಬ್ದ ಮಾಲಿನ್ಯ ಹೇಗೆ ಸಾಧ್ಯ ಎಂದು ಪ್ರಶ್ನಿಸಿತು.


ಅಝಾನ್ನ್ನು ದಿನದಲ್ಲಿ ಹೆಚ್ಚೆಂದರೆ 10ನಿಮಿಷಗಳಂತೆ 5 ಬಾರಿ ಕೂಗಲಾಗುತ್ತದೆ. ಬೆಳಿಗ್ಗೆ ಧ್ವನಿವರ್ಧಕದ ಮೂಲಕ ಅಝಾನ್ ನೀಡುವ ಮಾನವ ಧ್ವನಿಯು ಶಬ್ದ ಮಾಲಿನ್ಯವನ್ನು ಹೇಗೆ ಉಂಟು ಮಾಡುತ್ತದೆ ಎಂದು ನಾವು ತಿಳಿಯಲು ವಿಫಲರಾಗಿದ್ದೇವೆ ಎಂದು ಕೋರ್ಟ್ ಹೇಳಿದೆ.

- Advertisement -


ಮುಂಜಾನೆ 3 ಗಂಟೆಗೆ ದೇವಸ್ಥಾನದಲ್ಲಿ, ಡ್ರಮ್ಸ್ ಮತ್ತು ಸಂಗೀತದೊಂದಿಗೆ ಬೆಳಿಗ್ಗೆ ಆರತಿ ಕೂಡ ಪ್ರಾರಂಭವಾಗುತ್ತದೆ. ಹಾಗಾದರೆ ಇದು ಯಾರಿಗೂ ಯಾವುದೇ ರೀತಿಯ ಶಬ್ದವನ್ನು ಉಂಟುಮಾಡುವುದಿಲ್ಲವೇ? ಗಂಟೆಯ ಶಬ್ಧ ದೇವಾಲಯದ ಹೊರಗೆ ಕೇಳಿಸುವುದಿಲ್ಲವೇ ಎಂದು ಕೋರ್ಟ್ ಪ್ರಶ್ನಿಸಿದೆ.



Join Whatsapp