ಹತ್ರಾಸ್ ಕಾಲ್ತುಳಿತ: ‘ಭೋಲೆ ಬಾಬಾ’ಗಾಗಿ ಪೊಲೀಸರ ಹುಡುಕಾಟ

Prasthutha|

ಹತ್ರಾಸ್: 123 ಜನರ ಸಾವಿಗೆ ಕಾರಣವಾದ ಹತ್ರಾಸ್ನಲ್ಲಿ ಸತ್ಸಂಗ ನಡೆಸಿದ ಸ್ವಯಂಘೋಷಿತ ದೇವಮಾನವ ‘ಭೋಲೆ ಬಾಬಾ’ ಗಾಗಿ ಉತ್ತರ ಪ್ರದೇಶ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದು, ಗುರುವಾರ ಮೈನ್ ಪುರಿಯಲ್ಲಿರುವ ರಾಮ್ ಕುಟೀರ್ ಚಾರಿಟೇಬಲ್ ಟ್ರಸ್ಟ್ ನಲ್ಲಿ ಶೋಧ ನಡೆಸಿದರು.

- Advertisement -


ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಸಭೆಯ ಸಂಘಟಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆದರೆ ‘ಭೋಲೆ ಬಾಬಾ’ ಹೆಸರನ್ನು ಎಫ್ ಐಆರ್ ನಲ್ಲಿ ಇನ್ನೂ ಉಲ್ಲೇಖಿಸಿಲ್ಲ. ಮೈನ್ ಪುರಿಯ ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿಎಸ್ಪಿ) ಸುನೀಲ್ ಕುಮಾರ್ ಅವರು “ಆಶ್ರಮದೊಳಗೆ ಬಾಬಾ ಪತ್ತೆಯಾಗಿಲ್ಲ” ಎಂದು ಹೇಳಿದ್ದಾರೆ.


“ಆಶ್ರಮದೊಳಗೆ 40-50 ಸೇವಕರಿದ್ದಾರೆ, ಅವರು(‘ಭೋಲೆ ಬಾಬಾ’) ಆಶ್ರಮದ ಒಳಗೆ ಇಲ್ಲ. ಅವರು ನಿನ್ನೆಯೂ ಬಂದಿಲ್ಲ ಮತ್ತು ಇಂದು ಕೂಡ ಬಂದಿಲ್ಲ…” ಎಂದು ಮೈನಪುರಿ ಡಿಎಸ್ಪಿ ಸುನೀಲ್ ಕುಮಾರ್ ತಿಳಿಸಿದ್ದಾರೆ.



Join Whatsapp