ಹತ್ರಾಸ್: 122 ಜನರನ್ನು ಬಲಿ ಪಡೆದ ಹತ್ರಾಸ್ ಕಾಲ್ತುಳಿತ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಬುಧವಾರ ಘೋಷಿಸಿದ್ದಾರೆ.
‘ಕಾಲ್ತುಳಿತದಿಂದ ಮೃತಪಟ್ಟವರಲ್ಲಿ ಆರು ಮಂದಿ ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ. ಇವರಲ್ಲಿ ನಾಲ್ವರು ಹರಿಯಾಣದವರಾದರೆ, ಇನ್ನಿಬ್ಬರು ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ಬಂದಿದ್ದರು’ ಎಂದು ತಿಳಿಸಿದರು.
‘ದುರಂತಕ್ಕೆ ಯಾರು ಹೊಣೆ? ಉದ್ದೇಶಪೂರ್ವಕವಾಗಿ ಮಾಡಲಾಗಿದೆಯಾ? ಎಂಬ ಬಗ್ಗೆ ತನಿಖೆ ಬಹಿರಂಗಪಡಿಸಲಿದೆ. ನಿವೃತ್ತ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ನ್ಯಾಯಾಂಗ ತನಿಖೆಯ ಭಾಗವಾಗಲಿದ್ದಾರೆ’ ಎಂದು ತಿಳಿಸಿದರು.