ದ್ವೇಷ ಭಾಷಣ: ಸುದರ್ಶನ ಟಿವಿ ಸಂಪಾದಕ ಸುರೇಶ್ ಚವಾಂಕೆ ವಿರುದ್ಧ ಪ್ರಕರಣ ದಾಖಲು

Prasthutha|

ನವದೆಹಲಿ: ಹಿಂದೂ ಯುವ ವಾಹಿನಿ ಈ ತಿಂಗಳಾದಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದ್ವೇಷದ ಭಾಷಣ ಮಾಡಿದ ಮತ್ತು ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪದಲ್ಲಿ ಸುದರ್ಶನ ಟಿವಿಯ ಪ್ರಧಾನ ಸಂಪಾದಕ ಸುರೇಶ್ ಚವಾಂಕೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

- Advertisement -

ವಕೀಲರಾದ ಅವನಿ ಬನ್ಸಾಲ್, ಪ್ರಶಾಂತ್ ದುಬೆ ಮತ್ತು ಪ್ರಖರ್ ದೀಕ್ಷಿತ್ ಅವರು ಸಲ್ಲಿಸಿದ ದೂರಿನಲ್ಲಿ ಡಿಸೆಂಬರ್ 19, 2021 ರಂದು ಹಿಂದೂ ಯುವ ವಾಹಿನಿ ಆಯೋಜಿಸಿದ್ದ ಮತ್ತು ಚವಾಂಕೆ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ರಾಜೇಶ್ವರ್ ಸಿಂಗ್, ರಾಜೀವ್ ಕುಮಾರ್, ಉದಯ್ ಭಾನ್ ಸಿಂಗ್, ಪ್ರೇಮಪಾಲ್ ಗುಪ್ತಾ ಮತ್ತು ಇತರರು ಭಾಗವಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

- Advertisement -

ಭಾಷಣಗಾರರು ಕೋಮು ಗಲಭೆ ಮತ್ತು ದ್ವೇಷದ ಭಾವನೆಗಳನ್ನು ಪ್ರಚೋದಿಸಿ, ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಿದ್ದಾರೆ. ಅಗತ್ಯವಿದ್ದರೆ ಧರ್ಮದ ಹೆಸರಿನಲ್ಲಿ ಜನರನ್ನು ಕೊಲ್ಲಲು ಕರೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News



Join Whatsapp