ದ್ವೇಷ ಭಾಷಣ ಪ್ರಕರಣ: ಅಝಂ ಖಾನ್’ಗೆ ಜಾಮೀನು

Prasthutha|

ಲಕ್ನೋ: 2019ರ ದ್ವೇಷ ಭಾಷಣ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಮುಖಂಡ ಅಝಂ ಖಾನ್ ಅವರಿಗೆ ರಾಂಪುರ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದೆ.

- Advertisement -

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಹಿರಿಯ ಮುಖಂಡನಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದು, ಅದನ್ನು ನವೆಂಬರ್ 22 ರವರೆಗೆ ವಿಸ್ತರಿಸಲಾಗಿತ್ತು.

2019ರಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ರಾಂಪುರ ಮಾಜಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಂಜನೇಯ ಕುಮಾರ್ ಸಿಂಗ್ ಅವರ ವಿರುದ್ಧ ಟೀಕಿಸಿದ್ದಾಗಿ ಕಳೆದ ತಿಂಗಳು ರಾಂಪುರ ನ್ಯಾಯಾಲಯವು ಸಮಾಜವಾದಿ ಪಕ್ಷದ ಮುಖಂಡ ಆಝಂ ಖಾನ್’ಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

- Advertisement -

ದ್ವೇಷ ಭಾಷಣದ ಪ್ರಕರಣದಲ್ಲಿ ಅಝಂ ಖಾನ್’ಗೆ ಶಿಕ್ಷೆಯಾಗಿದ್ದು, ರಾಂಪುರ ಕ್ಷೇತ್ರದ ಶಾಸಕ ಸ್ಥಾನದಿಂದ ಅವರನ್ನು ಅನರ್ಹಗೊಳಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಝಂ ಖಾನ್ ಅವರು ಸುಪ್ರೀಂ ಕೋರ್ಟ್’ನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.



Join Whatsapp