ಹಾಸನ, ಹೊಳೆನರಸೀಪುರದಲ್ಲಿ ಜೆಡಿಎಸ್‌ಗೆ ಕಡಿಮೆ ಮತ

Prasthutha|

ಎಲ್ಲೆಲ್ಲಿ ಎಷ್ಟು ಮತ?

- Advertisement -

ಹಾಸನ: ಜೆಡಿಎಸ್ ಶಕ್ತಿಕೇಂದ್ರ ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ 68,587, ಶ್ರೇಯಸ್ ಪಟೇಲ್‌ಗೆ 88,347 ಮತ ದೊರೆತಿದೆ. ಅಲ್ಲದೆ, ರೇವಣ್ಣ ಶಾಸಕರಾಗಿರುವ ಕ್ಷೇತ್ರ ಹೊಳೆನರಸೀಪುರದಲ್ಲಿ ಪ್ರಜ್ವಲ್‌ಗೆ 80,193 ಮತ ದೊರೆತರೆ, ಶ್ರೇಯಸ್ ಪಟೇಲ್‌ಗೆ 97,800 ಮತಗಳು ದೊರೆತಿದೆ.

ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾಸನ, ಬೇಲೂರು, ಅರಸೀಕೆರೆ, ಶ್ರವಣಬೆಳಗೊಳ, ಸಕಲೇಶಪುರ, ಹೊಳೆನರಸೀಪುರ ಮತ್ತು ಕಡೂರು ವಿಧಾನಸಭಾ ಕ್ಷೇತ್ರಗಳಿವೆ.

- Advertisement -

ಕಡೂರು ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ 76,369. ಶ್ರೇಯಸ್ ಪಟೇಲ್ 74,126 ಮತ. ಶ್ರವಣಬೆಳಗೊಳದಲ್ಲಿ ಪ್ರಜ್ವಲ್ ರೇವಣ್ಣ 81,729 ಮತ, ಶ್ರೇಯಸ್ ಪಟೇಲ್ 81,800 ಮತಗಳನ್ನು ಪಡೆದಿದ್ದಾರೆ.

ಅರಕಲಗೂಡು ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ 80,637 ಮತ. ಶ್ರೇಯಸ್ ಪಟೇಲ್ 95,065 ಮತ ಪಡೆದರು. ಸಕಲೇಶಪುರದಲ್ಲಿ ಪ್ರಜ್ವಲ್ ರೇವಣ್ಣ 80,748 ಮತ್ತು ಶ್ರೇಯಸ್ ಪಟೇಲ್ 73,402 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಮತಗಳೂ ಸೇರಿ ಜೆಡಿಎಸ್ ಇಷ್ಟು ಮತಗಳನ್ನು ಪಡೆದಿದೆ ಎಂಬುದೂ ಗಮನಾರ್ಹ‌.

ಪುಟ್ಟಸ್ವಾಮಿ ಗೌಡರು 1985ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು. 1989, 1999ರ ಚುನಾವಣೆಯಲ್ಲಿ ಅವರು ದೇವೇಗೌಡರನ್ನು ಸೋಲಿಸಿದ್ದರು. ಅವರ ಮೊಮ್ಮಗ ಎಂ. ಶ್ರೇಯಸ್ ಪಟೇಲ್ ಎಚ್. ಡಿ. ರೇವಣ್ಣ ವಿರುದ್ಧ 2023ರ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ 84,951 ಮತಗಳನ್ನು ಪಡೆದು ರೇವಣ್ಣಗೆ ಪ್ರಬಲ ಪೈಪೋಟಿ ನೀಡಿದ್ದರು. ಈಗ ಲೋಕಸಭೆ ಚುನಾವಣೆಯಲ್ಲಿ ರೇವಣ್ಣರ ಮಗ ಪ್ರಜ್ವಲ್ ವಿರುದ್ಧ ಕಣಕ್ಕಿಳಿದು ಗೆಲುವು ಸಾಧಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಸದ್ಯ ಎಸ್‌ಐಟಿ ವಶದಲ್ಲಿದ್ದು, ಚುನಾವಣೆಯಲ್ಲಿಯೂ ಸೋಲಾಗಿದೆ.



Join Whatsapp