ಹಾಸನ: ಆಲೂರು ತಾಲ್ಲೂಕಿನ ಅಡಿಬೈಲು ಗ್ರಾಮದಲ್ಲಿ ಕಾಡಾನೆಯೊಂದು ವೃದ್ಧನನ್ನು ಕೊಂದು, ಸೊಂಡಿಲಿನಿಂದ ಹೊಸಕಿ ಹಾಕಿರುವ ಘಟನೆ ನಡೆದಿದೆ.
ವಿಶೇಷ ಎಂದರೆ ದಾಳಿ ಮಾಡಿದ್ದ ಆನೆಯು ವೃದ್ಧನ ಶವದ ಮೇಲೆ ಕಾಫಿ ಗಿಡಗಳನ್ನು ಬೀಳಿಸಿ ಅಲ್ಲಿಂದ ಕಾಲ್ಕಿತ್ತಿರುವ ಶಂಕೆ ವ್ಯಕ್ತವಾಗಿದೆ.
ಅಡಿಬೈಲು ಗ್ರಾಮದ ಪುಟ್ಟಯ್ಯ (78) ಮೃತ ವೃದ್ಧ. ಅವರು ಮಂಗಳವಾರ ಸಂಜೆ ಮಗ್ಗೆಯಿಂದ ಅಡಿಬೈಲು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ದಾಳಿ ನಡೆಸಿದ ಆನೆ, ಕಾಲಿನಿಂದ ತುಳಿದು ಮರಕ್ಕೆ ಅಪ್ಪಳಿಸಿ ಬಿಸಾಡಿದೆ. ನಂತರ ಶವಕ್ಕೆ ಕಾಫಿ ಗಿಡಗಳನ್ನು ಮುಚ್ಚಿ ಹೋಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.