ಬೆಂಗಳೂರನ್ನು ಹಾಗೂ ಕಾನೂನನ್ನು ಬಿಜೆಪಿ ಪಕ್ಷ ಗುತ್ತಿಗೆ ಪಡೆದಿದೆಯೇ?: ಕಾಂಗ್ರೆಸ್

Prasthutha|

ಬೆಂಗಳೂರು: ಬಿಬಿಎಂಪಿ ಆದೇಶವನ್ನು ಕಡೆಗಣಿಸಿ ಆಡಳಿತ ಪಕ್ಷವೇ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಅಳವಡಿಸಿರುವುದು ಕಂಡು ಬಂದಿದ್ದು, ಈ ಸಂಬಂಧ ಬಿಬಿಎಂಪಿ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ ಕಾರಿದೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಕಾನೂನು ರಾಜಕೀಯ ದ್ವೇಷಕ್ಕೆ ಬಳಸಿಕೊಳ್ಳಲು ಮಾತ್ರ ಇರುವುದೇ ಬೊಮ್ಮಾಯಿ ಅವರೇ? ಕಾಂಗ್ರೆಸ್ ಬ್ಯಾನರ್ ಗಳಿಗೆ ತಾವು ತೋರುವ ವೀರಾವೇಶ ನಿಮ್ಮ ಪಕ್ಷದವರ ಬ್ಯಾನರ್ ಗಳಿಗೆ ತೋರುತ್ತಿಲ್ಲವೇಕೆ? ಬೆಂಗಳೂರನ್ನು ಹಾಗೂ ಕಾನೂನನ್ನು ಬಿಜೆಪಿ ಪಕ್ಷ ಗುತ್ತಿಗೆ ಪಡೆದಿದೆಯೇ ಎಂದು ಪ್ರಶ್ನಿಸಿದೆ. ಬಿಬಿಎಂಪಿಯವರೇ ಕ್ರಮ ಕೈಗೊಂಡು ತಮ್ಮ ನಿಷ್ಪಕ್ಷಪಾತವನ್ನು ನಿರೂಪಿಸಿ ಎಂದು ಆಗ್ರಹಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್, ಬ್ಯಾನರ್ ಅಳವಡಿಕೆಗೆ ಬಿಬಿಎಂಪಿ ನಿಷೇಧ ಹೇರಿದ್ದರೂ, ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ ಬಿಜೆಪಿ ಮುಖಂಡ ವಿವೇಕ್ ರೆಡ್ಡಿ ಜನರಿಗೆ ದೀಪಾವಳಿ ಶುಭಾಶಯ ಕೋರುವ ಫ್ಲೆಕ್ಸ್ ಗಳನ್ನು ಹಾಕಲಾಗಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಪೋಸ್ಟರ್ ಗಳು ಅರಮನೆ ರಸ್ತೆಯಲ್ಲಿ ರಾರಾಜಿಸುತ್ತಿರುವುದು ಕಂಡು ಬಂದಿದೆ.

Join Whatsapp