ಹರಿಯಾಣ: ಕುಸ್ತಿಪಟು ವಿನೇಶ್ ಫೋಗಟ್ ಭರ್ಜರಿ ಜಯಭೇರಿ

Prasthutha|

ಜುಲಾನಾ: ಹರಿಯಾಣದಲ್ಲಿ ಅತಿ ಹೆಚ್ಚು ಕುತೂಹಲ ಮೂಡಿಸಿರುವ ಜುಲಾನಾ ವಿಧಾನಸಭೆ ಕ್ಷೇತ್ರದಿಂದ ಸ್ಫರ್ಧಿಸಿದ ಕುಸ್ತಿಪಟು ವಿನೇಶ್ ಫೋಗಟ್ ಭರ್ಜರಿ ಜಯಭೇರಿ ಬಾರಿಸಿದ್ದಾರೆ.

- Advertisement -

ವಿನೇಶ್ ಫೋಗಟ್ ಬಿಜೆಪಿ ಅಭ್ಯರ್ಥಿ ಯೋಗೇಶ್ ವಿರುದ್ಧ 6 ಸಾವಿರಕ್ಕೂ ಹೆಚ್ಚು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಯೋಗೇಶ್‌ ಕುಮಾರ್‌ ಮತ್ತು ವಿನೇಶ್‌ ಫೋಗಟ್‌ ಮಧ್ಯೆ ನೇರಾನೇರಾ ಪೈಪೋಟಿ ಇತ್ತು. ಆರಂಭದ ಮತ ಎಣಿಕೆಯಲ್ಲಿ ವಿನೇಶ್‌ ಫೋಗಟ್‌ ಅವರಿಗೆ ಮುನ್ನಡೆ ಸಿಕ್ಕಿದರೆ ನಂತರ ಯೋಗೇಶ್‌ ಕುಮಾರ್‌ ಅವರಿಗೆ ಮುನ್ನಡೆ ಸಿಕ್ಕಿತ್ತು. ಅಂತಿಮ ಸುತ್ತುಗಳ ಮತ ಎಣಿಕೆಯಲ್ಲಿ ಕಾಂಗ್ರೆಸ್‌ ಹೆಚ್ಚು ಮತಗಳು ಬಿದ್ದ ಪರಿಣಾಮ ವಿನೇಶ್‌ ಫೋಗಟ್‌ ಮೊದಲ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ.

- Advertisement -

ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆಯಲ್ಲಿ ಮೊದಲ ಎರಡು ಗಂಟೆ ಕಾಣಿಸಿಕೊಂಡಿದ್ದ ಟ್ರೆಂಡ್, ಸಂಪೂರ್ಣ ತಲೆಕೆಳಗಾಗಿದೆ. ಆರಂಭಿಕ ಸುತ್ತುಗಳಲ್ಲಿ ಕಾಂಗ್ರೆಸ್ ಉತ್ತಮ ಮುನ್ನಡೆ ಸಾಧಿಸಿತ್ತು.


ಆದರೆ ಒಂದೆರಡು ಸುತ್ತಿನ ಮತ ಎಣಿಕೆಯಲ್ಲಿ ಸಂಪೂರ್ಣ ಚಿತ್ರಣ ಬದಲಾಗಿದೆ. ಮುನ್ನಡೆ ಸಾಧಿಸಿ ಬೀಗುತ್ತಿದ್ದ ಕಾಂಗ್ರೆಸ್ ನಾಯಕರು, ಭಾರಿ ಹಿನ್ನಡೆಯ ಹೊಡೆತ ಅನುಭವಿಸಿದ್ದಾರೆ.



Join Whatsapp