ಹರಿಯಾಣ ಚುನಾವಣೆ: ವಿನೇಶ್ ಫೋಗಟ್ ಜುಲಾನಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

Prasthutha|

ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣೆಗೆ 32 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದೆ.

- Advertisement -


ಹರಿಯಾಣದ ಜುಲಾನಾದಿಂದ ಕುಸ್ತಿಪಟು ವಿನೇಶ್ ಫೋಗಟ್ ಸ್ಪರ್ಧಿಸಲಿದ್ದಾರೆ.


ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಗರ್ಹಿ ಸಂಪ್ಲಾ-ಕಿಲೋಯ್ ಮತ್ತು ರಾಜ್ಯ ಘಟಕದ ಮುಖ್ಯಸ್ಥ ಉದಯ್ ಭಾನ್ ಹೊಡಾಲ್ನಿಂದ ಸ್ಪರ್ಧಿಸಲಿದ್ದಾರೆ.

- Advertisement -


ಲಾಡ್ವಾದಿಂದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ವಿರುದ್ಧ ಕಾಂಗ್ರೆಸ್ ನ ಮೇವಾ ಸಿಂಗ್ ಕಣಕ್ಕಿಳಿಯಲಿದ್ದಾರೆ. ಸುರೇಂದರ್ ಪನ್ವಾರ್ ಸೋನಿಪತ್ನಿಂದ, ಭರತ್ ಭೂಷಣ್ ಬಾತ್ರಾ ರೋಹ್ಟಕ್ನಿಂದ, ಕುಲದೀಪ್ ವಾಟ್ಸ್ ಬದ್ಲಿಯಿಂದ, ಚಿರಂಜೀವ್ ರಾವ್ ರೆವರಿಯಿಂದ ಮತ್ತು ನೀರಜ್ ಶರ್ಮಾ ಫರಿದಾಬಾದ್ ಎನ್ ಐಟಿಯಿಂದ ಸ್ಪರ್ಧಿಸಲಿದ್ದಾರೆ.


32 ಮಂದಿಯ ಪೈಕಿ 28 ಹಾಲಿ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ವಿನೇಶ್ ಫೋಗಟ್ ಸೇರಿ ಐವರು ಮಹಿಳೆಯರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.



Join Whatsapp