ಮುಖ್ಯಮಂತ್ರಿಯ ಈ ಪ್ರಧಾನ ಸಲಹೆಗಾರನಿಗೆ 1 ರೂಪಾಯಿ ಸಂಬಳ!

Prasthutha|

ಪಂಜಾಬ್ : 2022ರ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ತಮ್ಮ ಪ್ರಧಾನ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೋಮವಾರ ಪ್ರಕಟಿಸಿದ್ದಾರೆ.

- Advertisement -

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ 1 ರೂ. ಸಂಬಳಕ್ಕೆ ತಮ್ಮ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಅವರು ಘೋಷಿಸಿದರು.

“ಪ್ರಶಾಂತ್ ಕಿಶೋರ್ ನನ್ನ ಪ್ರಧಾನ ಸಲಹೆಗಾರರಾಗಿ ನನ್ನೊಂದಿಗೆ ಸೇರಿಕೊಂಡಿದ್ದಾರೆ. ಪಂಜಾಬ್ ಜನರ ಸುಧಾರಣೆಗಾಗಿ ಒಟ್ಟಾಗಿ ಕೆಲಸ ಮಾಡಲು ಬಯಸುತ್ತೇವೆ” ಎಂದು ಅವರು ಹೇಳಿದರು.

ಕಳೆದ ಚುನಾವಣಾ ಪ್ರಚಾರ ನಿರ್ವಹಿಸಲು ಕಿಶೋರ್ ರನ್ನು ನೇಮಕ ಮಾಡಲಾಗಿತ್ತು ಮತ್ತು ಕಳೆದ ಬಾರಿ 117 ಸ್ಥಾನಗಳಲ್ಲಿ 77 ಸ್ಥಾನವನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು .ಆದ್ದರಿಂದ ಈ ಬಾರಿಯೂ ಪಕ್ಷದ ಮುಖ್ಯ ಜವಾಬ್ದಾರಿಗೆ ಹಲವು ಬಾರಿ ಕಿಶೋರ್ ಅವರಿಗೆ ಅಮರಿಂದರ್ ಸಿಂಗ್ ವೈಯಕ್ತಿಕವಾಗಿಯೇ ಅಹ್ವಾನ ನೀಡಿದ್ದಾರೆ.

ಕಿಶೋರ್ ಅವರನ್ನು ಕ್ಯಾಬಿನೆಟ್ ಸಚಿವರ ಸ್ಥಾನ ಮತ್ತು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪ್ರಧಾನ ಸಲಹೆಗಾರರಾಗಿ ನೇಮಕ ಮಾಡಲಾಗಿದೆ ಎಂದು ಪಂಜಾಬ್ ಕ್ಯಾಬಿನೆಟ್ ಪ್ರಕಟಿಸಿದೆ. ಅಧಿಸೂಚನೆಯ ಪ್ರಕಾರ, ಪ್ರಶಾಂತ್ ಕಿಶೋರ್ ಅವರ ಸಂಬಳ ಕೇವಲ 1 ರೂ. ಮಾತ್ರವಾಗಿರುತ್ತದೆ. ಆದಾಗ್ಯೂ, ಅವರು ಸರ್ಕಾರಿ ನಿವಾಸ ಮತ್ತು ಕಚೇರಿಯಂತಹ ಇತರ ಸೌಲಭ್ಯಗಳನ್ನು ಅವರು ಪಡೆಯಬಹುದಾಗಿದೆ.

- Advertisement -