ಹರ್ಯಾಣ ಚುನಾವಣೆ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದ ‘ಶ್ರೀಮಂತ ಮಹಿಳೆ’ ಸಾವಿತ್ರಿ ಜಿಂದಾಲ್

Prasthutha|

ಚಂಡೀಘಡ: ಬಿಜೆಪಿ ಸಂಸದ ನವೀನ್ ಜಿಂದಾಲ್ ಅವರ ತಾಯಿ 74 ವರ್ಷದ ಸಾವಿತ್ರಿ ಜಿಂದಾಲ್ ಅವರು ಈ ವರ್ಷ 29.1 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ದೇಶದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ.

- Advertisement -


ಹರಿಯಾಣ ವಿಧಾನಸಭಾ ಚುನಾವಣೆಯ ಆಕಾಂಕ್ಷಿಯಾಗಿದ್ದ ಅವರು ಗುರುವಾರ ಹಿಸಾರ್ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.


ಅಕ್ಟೋಬರ್ 5ರಂದು ನಡೆಯಲಿರುವ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಹಿಸಾರ್ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಮತ್ತು ಸಚಿವ ಕಮಲ್ ಗುಪ್ತರನ್ನೇ ಬಿಜೆಪಿ ಕಣಕ್ಕಿಳಿಸಿದ ಕೆಲವೇ ದಿನಗಳ ಅಂತರದಲ್ಲಿ ಸಾವಿತ್ರಿ ಜಿಂದಾಲ್ ಬಿಜೆಪಿ ವಿರುದ್ಧ ಬಂಡಾಯ ಸಾರಿದ್ದಾರೆ. ದೇಶದ ಅತಿ ಶ್ರೀಮಂತ ಮಹಿಳೆಯಾದ ಸಾವಿತ್ರಿ ಜಿಂದಾಲ್ ಅವರು ಕಬ್ಬಿಣ ಮತ್ತು ಇಂಧನ ಸಮೂಹ ಸಂಸ್ಥೆಯಾದ ಒ.ಪಿ.ಜಿಂದಾಲ್ ಸಮೂಹದ ಅಧ್ಯಕ್ಷೆಯಾಗಿದ್ದಾರೆ. ಅವರ ಪುತ್ರ ನವೀನ್ ಜಿಂದಾಲ್ ಇತ್ತೀಚೆಗೆ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

- Advertisement -


ಮಾಜಿ ಕಾಂಗ್ರೆಸ್ ಶಾಸಕಿ ಹಾಗೂ ಸಚಿವೆಯೂ ಆಗಿರುವ ಸಾವಿತ್ರಿ ಜಿಂದಾಲ್, ತಾನು ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಈ ಕ್ಷೇತ್ರದ ಮೇಲೆ ಸಾವಿತ್ರಿ ಜಿಂದಾಲ್ ಕುಟುಂಬವು ಹಲವಾರು ದಶಕಗಳಿಂದ ಹಿಡಿತ ಹೊಂದಿದೆ. ಆದರೆ, ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಲ್ಪಟ್ಟಿರುವ ಸಾವಿತ್ರಿ ಜಿಂದಾಲ್, ಸ್ವತಂತ್ರ ಅಭ್ಯರ್ಥಿಯಾಗಿ ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.


ಹಿಸಾರ್ ನ ಅಭಿವೃದ್ಧಿ ಮತ್ತು ಬದಲಾವಣೆಗೆಗಾಗಿ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿರು. “ಹಿಸಾರ್ನ ಜನರು ನನ್ನ ಕುಟುಂಬವಿದ್ದಂತೆ, ಓಂ ಪ್ರಕಾಶ್ ಜಿಂದಾಲ್ ಈ ಕುಟುಂಬದ ಜೊತೆ ನನಗೆ ಸಂಬಂಧ ಸ್ಥಾಪಿಸಿದರು. ಜನರ ನಿರೀಕ್ಷೆಗೆ ತಕ್ಕಂತೆ ಬದುಕಲು ಮತ್ತು ಅವರ ನಂಬಿಕೆಯನ್ನು ಉಳಿಸಿಕೊಳ್ಳಲು ನಾನು ಸಂಪೂರ್ಣವಾಗಿ ಸಮರ್ಪಿತಳಾಗಿದ್ದೇನೆ ಎಂದು ಸಾವಿತ್ರಿ ಜಿಂದಾಲ್ ಹೇಳಿದರು.



Join Whatsapp