ಹರಿಯಾಣ: ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ‘ಮತಾಂತರ ನಿಷೇಧ ಕಾಯ್ದೆ’ ಅಂಗೀಕಾರ

Prasthutha|

ಹರಿಯಾಣ: ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿರುವ ‘ಮತಾಂತರ ನಿಷೇಧ’ ಮಸೂದೆಗೆ ವಿರೋಧ ಪಕ್ಷಗಳ ವಿರೋಧದ ನಡುವೆಯೂ ಹರಿಯಾಣ ವಿಧಾನಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

- Advertisement -

ಮಸೂದೆ ಜಾರಿಯಲ್ಲಿರುವ ಕರ್ನಾಟಕ, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಪೈಕಿ ಇದೀಗ ಹರಿಯಾಣವೂ ಸೇರಿದೆ. ಈ ರಾಜ್ಯಗಳಲ್ಲೆಲ್ಲಾ ಬಿಜೆಪಿ ಅಧಿಕಾರದಲ್ಲಿದೆ.

ಮಸೂದೆಯ ಪ್ರಕಾರ ‘ ಅಪ್ರಾಪ್ತ , ವಯಸ್ಕ ಮಹಿಳೆ, ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಮತಾಂತರ ಮಾಡಿದರೆ ಅಥವಾ ಪ್ರಯತ್ನಿಸಿದರೆ ಅವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 3 ಲಕ್ಷಕ್ಕಿಂತ ಕಡಿಮೆ ದಂಡ ವಿಧಿಸಲಾಗುತ್ತದೆ.

Join Whatsapp