ಬಿಜೆಪಿ ಸರ್ಕಾರವಿದ್ದರೂ ಜೀವಕ್ಕೆ ಬೆಲೆ ಇಲ್ಲ: ಹರ್ಷನ ಸಹೋದರಿ ಅಶ್ವಿನಿ

Prasthutha|

FIR ದಾಖಲಾದರೂ ಅಶ್ವಿನಿ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದ ಸ್ಥಳೀಯರು

- Advertisement -

ಶಿವಮೊಗ್ಗ: ಇತ್ತೀಚೆಗೆ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟುಂಬದವರಿಗೆ ಗುಂಪೊಂದು ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹರ್ಷನ ಸಹೋದರಿ ಅಶ್ವಿನಿ ಎರಡೂ ಕಡೆ ಬಿಜೆಪಿ ಸರ್ಕಾರವಿದ್ದರೂ ಜೀವಕ್ಕೆ ಬೆಲೆ ಇಲ್ಲವಾಗಿದೆ ಎಂದು ಹೇಳಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹರ್ಷನ ಸಹೋದರಿ ಅಶ್ವಿನಿ, ಸೀಗೆಹಟ್ಟಿಯಲ್ಲಿನ ನಮ್ಮ ಮನೆಯ ಬಳಿ ಬಂದಿದ್ದ ಗುಂಪೊಂದು ಕೂಗಾಡಿ ಬೆದರಿಕೆ ಹಾಕಿದೆ. ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರ ಇದ್ದರೂ ನಮ್ಮ ಜೀವಕ್ಕೆ ಬೆಲೆ ಇಲ್ಲವಾಗಿದೆ. ನಾವು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಗೃಹ ಸಚಿವರು ನಮ್ಮ ಜಿಲ್ಲೆಯವರೇ ಆಗಿದ್ದರೂ ನಮಗೆ ರಕ್ಷಣೆ ಯಾವಾಗ ಸಿಗುತ್ತದೆ ಎಂದು ಪ್ರಶ್ನಿಸಿದ್ದಾರೆ.

- Advertisement -


ಮತ್ತೊಂದು ಕಡೆ ಆಜಾದ್ ನಗರದಲ್ಲಿ ನಡೆದ ಕಾರು ಜಖಂ ಪ್ರಕರಣದಲ್ಲಿ ಅಶ್ವಿನಿ ವಿರುದ್ಧ ಎಫ್ ಐಆರ್ ದಾಖಲಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅವರು ಸಾರ್ವಜನಿಕವಾಗಿ ಓಡಾಡಿಕೊಂಡೇ ಇದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

Join Whatsapp