ಹಿಜಾಬ್ ಹಾಕುವವರನ್ನು ಬದುಕಲು ಬಿಡಿ; ಹಿಜಾಬ್ ಪರ ಧ್ವನಿಯೆತ್ತಿದ “ಮಿಸ್ ಯುನಿವರ್ಸ್” ಹರ್ನಾಝ್ ಕೌರ್

Prasthutha|

ಮುಂಬೈ: ಹಿಜಾಬ್ ಪರ ಧ್ವನಿಯೆತ್ತಿರುವ 2021ರ ಮಿಸ್ ಯುನಿವರ್ಸ್ ಹರ್ನಾಝ್ ಕೌರ್ ಸಂಧು, ಹಿಜಾಬ್ ಹಾಕುವವರನ್ನು ಬದುಕಲು ಬಿಡಿ ಎಂದಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಹಿಜಾಬ್ ಕುರಿತಾಗಿ ನಿಮಗಿರುವ ಅಭಿಪ್ರಾಯವೇನು ಎನ್ನುವ ಪ್ರಶ್ನೆಗೆ ಉತ್ತರಿಸಿದ ಕೌರ್, ನೀವೇಕೆ ಹುಡುಗಿಯರನ್ನು ಟಾರ್ಗೆಟ್ ಮಾಡುತ್ತೀರಿ, ಹಿಜಾಬ್’ಧಾರಿಗಳನ್ನು ಏಕೆ ಟಾರ್ಗೆಟ್ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.

- Advertisement -

ಹಿಜಾಬ್ ಹಾಕುವವರನ್ನು ಬದುಕಲು ಬಿಡಿ, ಅವರು ಹೇಗೆ ಜೀವಿಸಲು ಬಯಸುತ್ತಾರೋ ಅದೇ ರೀತಿ ಬದುಕಲಿ, ಅವರನ್ನು ಹಾರಲು ಬಿಡಿ. ಅವರ ಸಂದೇಶಗಳನ್ನು ಕತ್ತರಿಸಲು ಹೋಗಬೇಡಿ, ಕತ್ತರಿಸುವುದಾದರೆ ನಿಮ್ಮನ್ನೇ ಕತ್ತರಿಸಿ ಎಂದಿದ್ದಾರೆ.

 ಹರ್ನಾಝ್ ಕೌರ್ 21ನೇ ವಯಸ್ಸಿನಲ್ಲಿ 79 ದೇಶಗಳ ಸ್ಪರ್ಧಿಗಳನ್ನು ಸೋಲಿಸಿ 2021ರಲ್ಲಿ  ‘ಮಿಸ್ ಯುನಿವರ್ಸ್’ ಪಟ್ಟಕ್ಕೇರಿದ್ದರು.

Join Whatsapp