ಹರೀಶ್ ಕುಮಾರ್ ರಾಜೀನಾಮೆ ಕೊಟ್ಟಿದ್ದಾರೆ, ಪಕ್ಷ ಅವರನ್ನು ಉಳಿಸಿಕೊಂಡಿದೆ: ಮಂಜುನಾಥ್ ಭಂಡಾರಿ

Prasthutha|

ಮಂಗಳೂರು: ಹರೀಶ್ ಕುಮಾರ್ ರಾಜೀನಾಮೆ ಕೊಟ್ಟಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷ ಅವರನ್ನು ಉಳಿಸಿಕೊಂಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದ್ದಾರೆ.

- Advertisement -

ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಬದಲಾವಣೆ ವಿಚಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹರೀಶ್ ಕುಮಾರ್ ಅವರು 2023ರ ವಿಧಾನಸಭಾ ಚುನಾವಣೆಗೆ ಮುಂಚೆ ರಾಜೀನಾಮೆಗೆ ಮುಂದಾಗಿದ್ದರು.ಕೆಪಿಸಿಸಿ ಅಧ್ಯಕ್ಷರು ಚುನಾವಣೆ ಮುಗಿಯೋ ತನಕ ಮುಂದುವರಿಯುವಂತೆ ಸೂಚಿಸಿದ್ದರು. 2024 ಲೋಕಸಭಾ ಚುನಾವಣೆ ವೇಳೆ ನನಗೆ ರಾಜೀನಾಮೆ ಸಲ್ಲಿಸಿದ್ದರು . ಆದರೆ ನಾನು ಮತ್ತು ಕೆಪಿಸಿಸಿ ಅಧ್ಯಕ್ಷರು ಮುಂದುವರಿಯುವಂತೆ ಕೇಳಿಕೊಂಡೆವು. ಇತ್ತೀಚೆಗೆ ಬದಲಾವಣೆ ಮಾಡಿದಾಗ ಹರೀಶ್ ಕುಮಾರ್ ಹೆಸರು ಬದಲಾವಣೆಯ ಪಟ್ಟಿಯಲ್ಲಿತ್ತು. ಆದರೆ ಪಕ್ಷ ಅವರನ್ನು ಮುಂದುವರಿಸಿದೆ ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾಗಳಲ್ಲಿ ಪ್ರಶ್ನೆ ಕೇಳುವವರು ನಮ್ಮ ಕಾರ್ಯಕರ್ತರಲ್ಲ, ವಾಟ್ಸಪ್ ಗ್ರೂಪ್ಗಳಲ್ಲಿ ಬಿಜೆಪಿ ಮತ್ತು SDPI ಕಾರ್ಯಕರ್ತರು ಸೇರಿಕೊಂಡು ಈ ಪ್ರಶ್ನೆ ಕೇಳುತ್ತಿದ್ದಾರೆ. ಅದಕ್ಕೆ ಕಾಂಗ್ರೆಸ್ ಪಕ್ಷದ ಕೆಲ ವಿಘ್ನಸಂತೋಷಿಗಳು ಬೆಂಬಲಿಸುತ್ತಿದ್ದಾರೆ. ಜಿಲ್ಲಾಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರಿಗೆ ಕಾಂಗ್ರೆಸ್ ಕಾರ್ಯಕರ್ತರು ವಾಟ್ಸಪ್ ನಲ್ಲಿ ಪ್ರಶ್ನೆ ಕೇಳುವುದಿಲ್ಲ ಎಂದು ಹೇಳಿದ್ದಾರೆ.

- Advertisement -

ನಾವು ಅಧಿಕಾರಕ್ಕಾಗಿ ಕಾಂಗ್ರೆಸ್ ಸೇರಿದವರಲ್ಲ, ನಾವು ವಿಚಾರಧಾರೆಗಾಗಿ ಕಾಂಗ್ರೆಸ್ ಸೇರಿದವರು. ನಾನು ಕಾರ್ಯಾಧ್ಯಕ್ಷ ಸ್ಥಾನ ಸಿಗುತ್ತೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ, ಪಕ್ಷ ನಮ್ಮನ್ನು ಗುರುತಿಸಿ ಜವಾಬ್ದಾರಿ ಕೊಟ್ಟಿದ್ದನ್ನು ನಾವು ನಿರ್ವಹಿಸುತ್ತಿದ್ದೇವೆ. ಹರೀಶ್ ಕುಮಾರ್ 1989ರಲ್ಲೇ ಶಾಸಕರಾಗಬೇಕಿತ್ತು, ಅವರ ಅನುಭವದಷ್ಟು ವಾಟ್ಸಪ್ ಯೂನಿವರ್ಸಿಟಿಯವರಿಗೆ ವಯಸ್ಸು ಕೂಡ ಆಗಿಲ್ಲ. ಹರೀಶ್ ಕುಮಾರ್ ಅಧಿಕಾರಕ್ಕೆ ಅಂಟಿಕೊಂಡಿಲ್ಲ, ರಾಜೀನಾಮೆ ಪತ್ರ ವರ್ಷದ ಹಿಂದೆಯೇ ಕೊಟ್ಟಿದ್ದಾರೆ, ಪಕ್ಷದ ಋಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Join Whatsapp