ಹರೇಕಳ: ಮಂಗಳೂರು ತಾಲೂಕಿನ ಹರೇಕಳ ಗ್ರಾಮದ ಆಲಡ್ಕದ ಬದ್ರಿಯ ಜುಮಾ ಮಸೀದಿಯ ದಫನ ಭೂಮಿಯಲ್ಲಿ ಕಿಡಿಗೇಡಿಗಳು ದುಷ್ಕ್ರತ್ಯ ನಡೆಸಿದ್ದು, ಬಿಯರ್ ಬಾಟಲಿ ಮತ್ತು ಮಾಂಸದ ತುಂಡು, ಎಲುಬುಗಳು ಪತ್ತೆಯಾಗಿವೆ. ಅಲ್ಲದೇ ಖಬರ್ ಸ್ಥಾನದ ಮೀಝಾನ್ ಕಲ್ಲು ಮತ್ತು ದಫನ ಮಾಡುವ ಹೊಂಡಗಳನ್ನು ಹಾನಿಗೊಳಿಸಲಾಗಿದೆ.
ಸೌಹಾರ್ದಯುತ ಪರಿಸರದಲ್ಲಿ ಧರ್ಮ – ಧರ್ಮಗಳ ಮಧ್ಯೆ ಒಡಕು ಉಂಟುಮಾಡಿ, ಸಾಮರಸ್ಯಕ್ಕೆ ಧಕ್ಕೆ ತರುವ ಕೃತ್ಯ ಇದಾಗಿದ್ದು, ಇದನ್ನು ಎಡ್ ಡಿಪಿಐ ಹರೇಕಳ ಗ್ರಾಮ ಸಮಿತಿಯು ಖಂಡಿಸಿದ್ದು ಮತ್ತು ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಘಟನಾ ಸ್ಥಳಕ್ಕೆ ಹರೇಕಳ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಎಸ್ ಡಿಪಿಐ ಮುನ್ನೂರು ಬ್ಲಾಕ್ ಅಧ್ಯಕ್ಷರಾಗಿರುವ ಅಬ್ದುಲ್ ಬಶೀರ್ ಮತ್ತು ಸ್ಥಳಿಯ ಎಸ್ ಡಿಪಿಐ ನಾಯಕರು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮಸೀದಿ ಆಡಳಿತ ಮಂಡಳಿಯೊಂದಿಗೆ ಸಮಾಲೋಚನೆ ನಡೆಸಿ, ಕಾನೂನು ಕ್ರಮಕ್ಕೆ ಸಹಕರಿಸುವ ಭರವಸೆ ನೀಡಿದರು.